Showing posts with label ಗುರುರಾಯಾ ದೊಡ್ಡವನೈ ಬಲು ಪರೋಪಕಾರಿ mahipati. Show all posts
Showing posts with label ಗುರುರಾಯಾ ದೊಡ್ಡವನೈ ಬಲು ಪರೋಪಕಾರಿ mahipati. Show all posts

Wednesday, 1 September 2021

ಗುರುರಾಯಾ ದೊಡ್ಡವನೈ ಬಲು ಪರೋಪಕಾರಿ ankita mahipati

ಗುರುರಾಯಾ ದೊಡ್ಡವನೈ ಬಲು ಪರೋಪಕಾರಿ | ಪರಿ | ಪರಗತಿಯ ಸಾಧಕರಾಗುವ ಸಹಕಾರಿ | ಬೋಧ ಸುಧೆಯ ಉದಾರಿ | ಯುಕ್ತಿಯ ದೋರುವ ದಾರಿ 1 

ಹಲವು ಶಾಸ್ತ್ರದ ಮಾತುಗಳ ಕೇಳಿ ಮುಂಗಾಣದೆ | ತೊಳಲುವ ಮನ ಸಂಶಯವಾ ವಂದು ಮಾತಿನಿಂದೆ | ಕಳೆದನು ದೃಢ ನೆಲೆಗೊಳಿಸಿ ಸ್ವಾನುಭವದಿಂದೆ | ಭವ ತಮ ಮೂಲದಿಂದಲೇ | ಬೆಳಗವ ದೋರುವ ತಂದೇ2 

ಮೂಢ ಪಾಮರ ಮಂದಧಿಯನಾನೆಂದರಿಯೆನು | ನೋಡಿ ಕರುಣ ಕಟಾಕ್ಷದಲಿ ಮುಂದಕ ಕರೆದನು | ನೀಡಿ ಅಭಯ ಹಸ್ತವನು ರೂಢಿಯೊಳು ನಂದನೆನಿಸಿದನು | ಮಹಿಪತಿ ತ್ಯಾಜವಿತ್ತನು 3

****