ಕಾಸನಿತ್ತು ಕೊಂಡರಾರು ಕಾಸನಿತ್ತು ಕೊಂಡರಾರು ಮಾಸದಂಥ ಸುಕೃತವನ್ನು || ಪ ||
ಈಸು ಬುರುಡೆಯಾಗಬಹುದೇ ಹಸಿದ ಹಾಸು ಭೀಕರ|| ಅಪ ||
ಆರಬೇಡ ಹಾರಬೇಡ | ಭಾರ ಬೇಡ ಹೇರು ಹೊರೆಯು ಮೀರಬೇಡ ಮಾರ ಬೇಡ |
ತೋರ ಸುಳಿಯು ಆಸೆಯು ಹರಿವೆನೆನಲು ಅಂಕುಡೊಂಕು|ತೊರೆವೆನೆನಲು ಕೊಂಡಿ ಕುಣಿಕೆ ಮೆರೆವೆನೆನಲು ಮೆರವಣಿಗೆಯು|ಇರುವೆನೆನಲು ಜಾತ್ರೆಯು ಕತ್ತಲಲ್ಲಿ ಕಣ್ಣುಕಟ್ಟಿ | ಬಿತ್ತುತಿರಲು ರಕ್ತ ಬೀಜ ಎತ್ತಿ ನಿಲಿಸೊ ಬೀಳದಂತೆ | ಸತ್ತೆ ಚೆನ್ನಕೇಶವ
***