..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಗೋಪಸತಿಯರೆಲ್ಲ ಕೇಳೆರೆನ್ನಯ ಮಾತ
ಈ ಪರಿ ಕೂಸಿನ ಕಂಡೀರ್ಯಾ ಪ
ತೊಟ್ಟಿಲೊಳಗಿಟ್ಟು ವತ್ತಿ ಮಾತಾಡದೆ
ಮುಟ್ಟದೆ ಉಣಲಿಕ್ಕೆ ಕುಳಿತಿರಲು
ಚಿಟ್ಟಕ್ಕಿ ಚೀರೆದ್ದು ಭೇಟಿ ತಾನಳುತಿಹ
ಹೊಟ್ಟಿ ತುಂಬಾ ಉಣಲೀಸ ಎಷ್ಟೆಂದೇಳಲೆ ನಾನು 1
ಬಣ್ಣಿಸಿ ಬಣ್ಣಿಸಿ ಪದವ ಪಾಡಿ ತೂಗಿ
ಥಣ್ಣಾಗೆ ಬೀಸಿ ಬೀಸಣಿಕೆಯಲಿ
ಕಣ್ಣ ಮುಚ್ಚಿಸಿದೆವೆಂದರಿತು ಸುಪ್ಪಾಣಿಸೆ
ಅಣ್ಣ ತಾನೇಳುವ ನಿದ್ರೆಗೈಯ್ಯಲೀಸ 2
ಅನಿಮಿಷರಾದೆವೆ ಅನಶನರಾದೆವೆ
ಮನಸು ಕೂಸಿನಲ್ಲೆ ನಟ್ಟಿಹುದೆಮಗೆ
ಮನೆಕೆಲಸಗಳಲ್ಲ ಎಲ್ಲಿವೆ ನಮಗಿನ್ನು
ತನಯ ಪುಟ್ಟಿದ ಪುಣ್ಯದಿಂದಲ್ಲಿನ್ನೇನೆಂಬೆ 3
ಚಿಕ್ಕವರೊಳು ಪೋಗಿ ಮಕ್ಕಳಾಟಿಕೆ ಆಡಿ
ಲೆಖ್ಖವಿಲ್ಲದ ದೂರು ಘಕ್ಕನೆ ತರುವ
ರಕ್ಕಸರೆನÀಲು ತಾ ಲೆಕ್ಕಿಸದವರ
ಸೊಕ್ಕು ಮುರಿವನಿವನಕ್ಕೊಜಾಕ್ಕೇನೆಂಬೆ4
ದೇವತೆಗಳ ಮೀಸಲಾವಾಗ ಮೆಲುವನು
ಸೇವಕರಂತಲ್ಲೆ ತಾವಾ ಹೊರೆ
ದಾವಾದಿ ಭಯದಿಂದ ಕಾವಾನೀತನೆ ವಾಸು -
ದೇವಾವಿಟ್ಠಲನೆಂದು ಭಾವಿಸಿ ತಿಳಿವೆನು 5
***