Showing posts with label ಆರುತಿ ಮಾಡಿರೆ ನೀರೆಯಲ್ಲೆರು others. Show all posts
Showing posts with label ಆರುತಿ ಮಾಡಿರೆ ನೀರೆಯಲ್ಲೆರು others. Show all posts

Friday, 27 December 2019

ಆರುತಿ ಮಾಡಿರೆ ನೀರೆಯಲ್ಲೆರು others

by ಅರಕೆರೆ  ಸಂಜೀವದಾಸರು
ಆರತಿ ಮಾಡಿರೆ ನೀರೆಯಲ್ಲೆರು
ಮಾರಮಣನಾದ ಶ್ರೀ ರಂಗರಾಜನಿಗೆ ||ಪ||

ನೀರೊಳು ಮುಳುಗುತ  ಭಾರ ಬೆನ್ನಲಿ ಪೊತ್ತು
ಕೋರೆಯ ತೋರಿದ ನಾರಸಿಂಹನಿಗೆ ||೧||

ಪೋರ ರೂಪನಾದ ಧೀರ ಪರಶುಧರಗೆ  
ಶ್ರೀ ರಘುರಾಮನೆಂಬ ಚೋರ ಶಿಖಾಮಣಿಗೆ ||೨||

ಚಾರು ಬೌದ್ಧನಿಗೆ ವೀರ ರಾಹುತಗೆ
ನೀರಜನಾಭ ಶ್ರೀ ರಂಗೇಶವಿಠಲಗೆ ||೩||
********