ಇಂದು ಕಾಯಲಾ ಭಕ್ತವತ್ಸಲಾ
ಬಂದು ಒದಗಿ ನಿಂದು ಭಯವ ದೂರ ಮಾಡೆಲಾ ||ಪ||
ಮೊರೆಯ ಕೇಳೆಲಾ ಹರಿಯೆ ನಿಶ್ಚಲಾ
ಕರುಣದಿಂದ ಒದಗಿ ಬೇಗ ದುರಿತ ಹರಿಸೆಲಾ ||೧||
ಸುಳುಹುದೋರೆಲಾ ಹೊಳೆದು ವಿಠ್ಠಲಾ
ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ ||೨||
ತಂದೆ ನೀನೆಲಾ ತಾಯಿ ನೀನೆಲಾ
ಬಂಧು ಬಳಗ ದೈವ ಕುಲಕೋಟಿ ನೀನೆಲಾ ||೩||
ಹಿಂದೆ ಶರಣರ ಬಂದು ಕಾಯ್ದೆಲಾ
ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ ||೪||
ಅಂದು ಒದಗಿ ನೀ ಬಂದು ಪರಿಯಲಾ
ಇಂದು ಅಭಿಮಾನ ಕಾವ ಬಿರುದು ನಿನದೆಲಾ ||೫||
ದೀನಜನರಿಗೇ ದಾತ ನೀನೆಲಾ
ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ ||೬||
ಪುಣ್ಯಪ್ರಭೆಯದಾ ಕಣ್ಣದೆರಿಯಲಾ
ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ ||೭||
***
ತಿಲಂಗ ರಾಗ ದಾದರಾ ತಾಳ (raga tala may differ in audio)
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಕಾಯಲಾ ಭಕ್ತವತ್ಸಲಾ ಬಂದು ಒದಗಿ ನಿಂದು ಭಯವ ದೂರ ಮಾಡಲಾ P
ಮೊರಿಯು ಕೇಳೆಲಾ ಹರಿಯು ನಿಶ್ಚಲಾ ದುರಿತ ಹರಿಸೆಲಾ 1
ಸುಳವದೋರಲಾ ಹೊಳೆದು ವಿಠ್ಠಲಾ ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ 2
ಬಂಧುಬಳಗ ದೈವ ಕುಲಕೋಟಿ ನೀನೆಲಾ3
ಹಿಂದೆ ಶರಣರ ಬಂದು ಕಾಯ್ದೆಲಾ ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ 4
ಅಂದು ಒದಗಿ ನೀ ಬಂದ ಪರಿಯಲಾ ಇಂದು ಅಭಿಮಾನ ಕಾವ ಬಿರುದು ನಿನ್ನದಲ್ಲಾ 5
ದಾತ ನೀನೆಲಾ ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ 6
ಪುಣ್ಯಪ್ರಭೆಯಿಂದಾ ಕಣ್ಣುದೆರಿಯಲಾ ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ 7
***