Showing posts with label ಶ್ಯಾಮಸುಂದರ ಕಾಮಿತಾರ್ಥದಾ ಪ್ರೇಮದಿ ಬಾ indiresha. Show all posts
Showing posts with label ಶ್ಯಾಮಸುಂದರ ಕಾಮಿತಾರ್ಥದಾ ಪ್ರೇಮದಿ ಬಾ indiresha. Show all posts

Monday, 2 August 2021

ಶ್ಯಾಮಸುಂದರ ಕಾಮಿತಾರ್ಥದಾ ಪ್ರೇಮದಿ ಬಾ ankita indiresha

ಶ್ಯಾಮಸುಂದರ ಕಾಮಿತಾರ್ಥದಾ ಪ್ರೇಮದಿ ಬಾಶ್ಯಾಮಸುಂದರಾ ಕಾಮಜನಕನೆ ಪ್ರೇಮದಿಂದಲಿಸೋಮಶೇಖರ ನುತ ಶಾಮಸುಂದರಾ ಪ


ನಾರೀಮಣಿಯ ದನಿಯ ಕೇಳುತ ಸೀರೆಗಳನು ಸೂರೆ ಮಾಡುತಸಾರಸಾಕ್ಷನೆ ಪಾರು ಮಾಡಿದಿ ಭೂರಿ ಸಭೆಯೊಳು ನೀ ಶ್ಯಾಮಸುಂದರಾ 1

ಸಣ್ಣ ಶಿಶುವು ಬಂದು ವನದಿ ನಿಮ್ಮ ನಾಮ ಸ್ಮರಿಸೆ ಮನದಿಧನ್ಯಬಾಲಕನನ್ನು ಕರುಣದಿ ಮನ್ನಿಸಿದೆಯೋ ನೀಶ್ಯಾಮಸುಂದರಾ 2

ಈ ಶರೀರದೊಳಗೆ ನಿನ್ನ ವಾಸುದೇವನೇ ನೋಡೋಆಶೆಯಿಂದಲಿ ಪೋಷಿಸಿಂದಿರೇಶಾ ಬೇಗನೆ ಬಾಶ್ಯಾಮಸುಂದರಾ 3

****