..
kruti by Nidaguruki Jeevubai
ಉಡಿಯ ತುಂಬಿರೆ ಕಡಲೊಡೆಯನ
ಮಡದಿಗ್ಹರುಷದಿ ಪ
ಬಿಡಿಯ ಮುತ್ತು ಬಿಗಿದ ತಟ್ಟೆಯ
ಪಿಡಿದು ಬೇಗದಿಅ.ಪ
ಅಚ್ಚ ಜರಿಪೀತಾಂಬ್ರನುಟ್ಟ ಅಚ್ಚುತನರಸಿಗೆ
ಹೆಚ್ಚಿನ ಆಭರಣ ಧರಿಸಿ ಮೆರೆವ ದೇವಿಗೆ
ಅಚ್ಚುತನ ವಕ್ಷಸ್ಥಳದಿ ವಾಸಿಪ ಲಕುಮಿಗೆ
ಅಚ್ಚಮುತ್ತು ಅರಿಶಿನಡಿಕೆ ಉತ್ತತ್ತಿ ಫಲಗಳು 1
ನಿಂಬೆ ನೇರಳೆ ಜಂಬು ದ್ರಾಕ್ಷಿ ಕದಳಿ ಫಲಗಳಿಂ
ಅಂಬುಜಾಕ್ಷನರಸಿಗೆ ದಾಳಿಂಬೆ ತೆಂಗು ಸಹಿತದಿ
ಅಂಬುಧಿಯೊಳು ಜನಿಸಿದ ಮುಕುಂದನರಸಿಗೆ
ಅಂಬುಜಾಕ್ಷಿಯರೆಲ್ಲ ನೆರೆದು ಸಂಭ್ರಮಪಡುತಲಿ2
ಮಾದಳದ ಫಲವು ಮಾವು ಪನೆÀ್ನರಿಲ ಫಲಗಳ
ಮಾಧವನ ಮಡದಿಗೀಗ ಮಾನಿನಿಮಣಿಯರು
ಕ್ರೋಧಿನಾಮ ಸಂವತ್ಸರದಿ ಸಾಧು ಜನಗಳ
ಆದರಿಸಿ ಕಾವ ಕಮಲನಾಭ ವಿಠ್ಠಲನರಸಿಗೆ 3
***