Showing posts with label ಕಷ್ಟದಿ ಕಾಲವ ಕಳೆವೆನು ದೇವಾ govinda. Show all posts
Showing posts with label ಕಷ್ಟದಿ ಕಾಲವ ಕಳೆವೆನು ದೇವಾ govinda. Show all posts

Monday, 11 November 2019

ಕಷ್ಟದಿ ಕಾಲವ ಕಳೆವೆನು ದೇವಾ ankita govinda

by ಗೋವಿಂದದಾಸ
ಕಷ್ಟದಿ ಕಾಲವ ಕಳೆವೆನು ದೇವಾ |ಪಕ್ಷಿವಾಹನ ಕಾಯೋ ಕರುಣ ಸಂಜೀವಾ ಪ

ಕೃಷ್ಣಮೂರುತಿ ಫಲುಗುಣನಿಗೆಭಾವ|ಸೃಷ್ಟಿಗೊಡೆಯ ಭಕ್ತಜನರನು ಪೊರೆವಾ ||ಉಟ್ಟ ಸೀರೆಯನು ಕುರು ದುಷ್ಟನು ಸೆಳೆಯಲು |ರಕ್ಷಿಸೆನ್ನುತ ಮೊರೆಯಿಟ್ಟ ದ್ರೌಪದಿಗೆ ||ಅಕ್ಷಯವರವಿತ್ತು ಪಕ್ಷಿವಾಹನ ಕಾಯ್ದೆ |ಸೃಷ್ಟಿಗೊಡೆಯ ಶ್ರೀಕೃಷ್ಣಾವತಾರ 1

ದಾನವಾಂತಕ ಭಕ್ತ ದೀನದಯಾಕರ |ಮಾನವಶರೀರ ಮನುಮಥನಯ್ಯ ||ಭಾನುನಂದನಫಣಿಬಾಣವನೆಸೆಯಲು |ಜಾಣತನದಿ ನರನ ಪ್ರಾಣವನುಳುಹಿದೆ 2

ನಂದಗೋಪನ ಮುದ್ದು ಕಂದನ ಚರಣಕ್ಕೆ |ವಂದಿಸಿ ಕರಗಳಾನಂದದಿ ಮುಗಿವೆ ||ಇಂದಿರೆಯರಸ ಗೋವಿಂದ ಜನಾರ್ದನ |ಮಂದರಧರ ಅರವಿಂದ ನಯನ ದೇವಾ3
********