ಕಾಖಂಡಕಿ ಶ್ರೀ ಕೃಷ್ಣದಾಸರು
ಎಂತು ದೊರೆವುದೋ ಇಂತು ನರದೇಹ ಮುಂದೆ ಬಾಹ ದಿನ್ನೆಂದಿಗೆ ಇಚಿದು ಕರುಣಿಸಿ ಸಲಹುಯನ್ನ ಮು| ಕುಂದ ನಿನ್ನಂಘ್ರಿಗಳ ತೋರಿಸಿ 1
ಮೊದಲೇ ದುರ್ಲಭ ಮನುಷ್ಯಾಂಗವು ಅದರೊಳುತ್ತಮ ವರ್ಣದಿ ಉದಿಸಿ ಭಗವಂತಾಂಘ್ರಿ ದರುಶನ ವದಗಿ ಗತಿಗೈದಿಸುವ ಜನುಮವು 2
ಗುರುಹಿರಿಯರೆಂದೆರಿಸಿ ಅವರನು ಸ್ಮರಿಸಿ ಭಕ್ತಿಗೆ ಸೇರಿಸಿ ಮರೆಸಿ ಅನ್ಯವ ಬೆರೆಸಿ ನಿಜದೊಳು ತರಿಸಿ ತಾರಿಸುತಿಹ ಜನುಮವು 3
ಹರಿಯ ಲಾಂಛನ ಪೌಂಡ್ರವು ಕೊರಳು ತುಳಸಿಯ ಮಾಲೆಯಾ ಧರಿಸಿದಂಡಿಗೆ ವಿಡಿದು ಮಾಧವ ಚರಿತ ಪಾಡುತ ನಲಿವ ಜನುಮವು 4
ತನ್ನವರ ಪರಿಚಾರಕೆನಿಸುವ ಘನ್ನ ಬಿರದಿಗೆ ಪಾಲಿಸೀ ಸನ್ನುತನೆ ಗುರುಮಹಿಪತಿ ಪ್ರಭು ನಿನ್ನ ವಲುಮಿಂದಾದರಾಗಲಿ 5
***