Showing posts with label ಯೋಗಿವರ್ಯ ಶಿರಬಾಗಿ ನಮಿಸುವೆನು ಶ್ರೀ ರಾಘವೇಂದ್ರನೆ indiresha YOGIVARYA SHIRABAGI NAMISUVENU SRI RAGHAVENDRANE. Show all posts
Showing posts with label ಯೋಗಿವರ್ಯ ಶಿರಬಾಗಿ ನಮಿಸುವೆನು ಶ್ರೀ ರಾಘವೇಂದ್ರನೆ indiresha YOGIVARYA SHIRABAGI NAMISUVENU SRI RAGHAVENDRANE. Show all posts

Tuesday, 5 October 2021

ಯೋಗಿವರ್ಯ ಶಿರಬಾಗಿ ನಮಿಸುವೆನು ಶ್ರೀ ರಾಘವೇಂದ್ರನೆ ankita indiresha YOGIVARYA SHIRABAGI NAMISUVENU SRI RAGHAVENDRANE

Audio by Vidwan Sumukh Moudgalya


ತಿರುಪತಿ ಶ್ರೀ ಪಾಂಡುರಂಗಿ ಹುಚ್ಚಾಚಾರ್ಯ ವಿರಚಿತ 
( ಇಂದಿರೇಶಾಂಕಿತ )

 ಶ್ರೀ ರಾಘವೇಂದ್ರಗುರುಸಾರ್ವಭೌಮರ ಸ್ತುತಿ ಪದ 

 ರಾಗ : ಚಕ್ರವಾಕ   ಆದಿತಾಳ 

ಯೋಗಿವರ ಶಿರ ಬಾಗಿ ನಮಿಸುವೆನು, ಶ್ರೀರಾಘವೇಂದ್ರರೆ
॥ಪ॥

ಹೇಳಿದ್ವಚನವ ಕೇಳಿ ಮನದೊಳು ಭಾಳು ಸುಖಿಸುತಲೆ
ಕಾಲಕಾಲಕೆ ಶ್ರೀಲಲಾಲಮನ ಲೀಲೆ ಪಾಡುತ ವ್ಯಾಳ್ಯನೋಡುವೆ॥೧॥

ಸತ್ಯವಾಣಿಯು ಮಿಥ್ಯವಾಗದು ಮರ್ತ್ಯ ಲೋಕದೊಳು
ಚಿತ್ತದೊಳಗಿಹ ನಿತ್ಯಚಿಂತಿಪಿ ವೃತ್ತಿ ಕೃಷ್ಣನೊಳಿತ್ತು 
ಪಾಡುವೆ॥೨॥

ಎಲ್ಲ ಬಿಟ್ಟವ ಸುಳ್ಳನಾಡುವದೆಲ್ಲ್ಯೂ ಕಾಣಿಸದೋ
ಫುಲ್ಲನಾಭನೆ ನಿನ್ನ ಭಕ್ತನಲ್ಲಿ ಹೇಳಿದಸಲ್ಲು 
ಕಾದುಕೋ॥೩॥

ಆಶೆ ತೋರಿ ನಿರಾಶೆ ಮಾಡಲು ದಾಸ ಜನರೊಳಗೆ
ಈಶನಿಗೆ ಬಹುದೋಷವೆಂಬುದು ಭಾಷಿಸಿದೆ ಯತಿವೇಷ
ದಿವಿಜನೆ॥೪॥

ಉಕ್ತ ವಚನದ ಕೃತ್ಯ ಮಾಡಲು ಶಕ್ತನಾರದನು
ವೃತ್ತಿ ಪೇಳದನ್ಹತ್ತರಾತನ ಭೃತ್ಯನ್ ಆಶಯ
 ಪೂರ್ತಿಮಾಡುವ॥೫॥

ನೀನೆ ಬಾಂಧವ ನೀನೆ ದೈವತ ನೀನೆ ಗುರು ಪಿತನು
ನಾನು ನಂಬಿದೆ ಮೌನಿ ತೋರಿಸು ವೇಣುಬಾಲಕ
ನಾನನಾಬ್ಜಕ॥೬॥

ವಂದೆ ಮನದೊಳು ನಿಂದು ನಿನಪದ ದ್ವಂದ್ವ ಭಜಿಸುವೆನು
 ಇಂದಿರೇಶನ ಮುಂದೆ ಗುರುವರ ಇಂದು ಎನ್ನೊಳು ನಿಂದು
ಪ್ರಾರ್ಥಿಸು॥೭॥
****

ಯೋಗಿವರ್ಯ ಶಿರಬಾಗಿ ನಮಿಸುವೆನು ಶ್ರೀ ರಾಘವೇಂದ್ರನೆ ಪ
ಹೇಳಿದ ವಚನವ ಕೇಳಿ ಮನದಲಿ ಬಹಳ ಸುಖಿಸುತಲಿಕಾಲಕಾಲಕೆ ಶ್ರೀ ಲಲಾಮನ ಲೀಲೆ ಪಾಡುತ ವ್ಯಾಳೆ ನೋಡುವಿ 1

ಸತ್ಯವಾಣಿಯು ಮಿಥ್ಯವಾಗದು ಮತ್ತೆ ಲೋಕದೊಳುಚಿತ್ತದೊಳು ಅನಿತ್ಯ ಚಿಂತಿಸಿ ವೃತ್ತಿ ಕೃಷ್ಣನೊಳು ಇತ್ತು ಪಾಡುವಿ 2

ಎಲ್ಲ ಬಿಟ್ಟವ ಸುಳ್ಳನಾಡೊದು ಎಲ್ಲಿ ಕಾಣಿಸದುಫುಲ್ಲನಾಭನ ಭಕ್ತನಲ್ಲಿ ಹೇಳಿದ ಸುಳ್ಳು ಕಾದುಕೋ 3

ಆಶೆ ತೋರಿಸಿ ನಿರಾಶೆ ಮಾಡುವುದು ದಾಸ ಜನರೊಳಗೆಈಶ ನಿಜ ಬಹು ತೋಷವೆಂಬುದು ಭಾಷಿಸದೆಯತಿವೇಷ ದಿವಿಜನೆ 4

ಶಕ್ತಿವಚನವ ಕೃತ್ಯಮಾಡಲು ಶಕ್ತನಾರದನು ಒತ್ತಿ ಪೇಳಿದಹತ್ತರಾತನ ಭೃತ್ಯರಾಶಯ ಪೂರ್ತಿಮಾಡಿಸು 5

ನೀನೇ ಬಾಂಧವ ನೀನೇ ದೈವತ ನೀನೇ ಗುರುಪಿತನುನಾನು ನಂಬಿದೆ ಮೌನಿ ತೋರಿಸು ವೇಣು ಬಾಲಕನ ಜವ 6

ಒಂದೆ ಮನದಲಿ ನಿಂತು ನಿನ್ನ ಪದದ್ವಂದ್ವ ಭಜಿಸುವೆನುಇಂದಿರೇಶನ ಮುಂದೆ ಗುರುವರ ಇಂದು ಎನ್ನೊಳುನಿಂದು ಪ್ರಾರ್ಥಿಸು 7
****