Showing posts with label ಮೇರುಸುತ ಗಿರಿವಾಸ ಶ್ರೀನಿವಾಸ ಕಲ್ಯಾಣ ankita prasannashreenivasa. Show all posts
Showing posts with label ಮೇರುಸುತ ಗಿರಿವಾಸ ಶ್ರೀನಿವಾಸ ಕಲ್ಯಾಣ ankita prasannashreenivasa. Show all posts

Friday, 27 December 2019

ಮೇರುಸುತ ಗಿರಿವಾಸ ಶ್ರೀನಿವಾಸ ಕಲ್ಯಾಣ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀನಿವಾಸ ಕಲ್ಯಾಣ (ಅಣು)


ಮೇರು ಸುತ ಗಿರಿವಾಸ |

ಶರಣಾದೆ ನಿನ್ನಲಿ ವಿಶ್ವಜನ್ಮಾದಿಕರ್ತ ನಿರ್ದೋಷ |

||ಶ್ರೀ ಶ್ರೀನಿವಾಸ ||

ವಿಷ್ಣು ಸರ್ವೋತ್ತಮ ಸಾಕ್ಷಾತ್ |

ರಮಾದೇವಿ ತದಂತರಾ |

ತದಧೌ ವಿಧಿ ವಾಣ್ಯೌಚ ತತ್ವವನು ಪ್ರತ್ಯಕ್ಷ ಭೃಗುಗೆ |

ತಿಳಿಸಿ ಲಕ್ಷ್ಮಿಯ ಇಳೆಯ ಜನರಿಗೆ ಒಲಿಯೆ ಕಳುಹಿಸಿ |

ವ್ಯಾಳಗಿರಿ ವಲ್ಮೀಕ ಪೊಕ್ಕಿ ಶ್ರೀವತ್ಸಶರಣು |

ಶರಣು ಹೇ ಸರ್ವ ಹೃದ್ಗುಹಾಂತಸ್ಥವಿಶ್ವ ಪ


ವೃಷಭ ಅಂಜನ ಶೇಷ |

ವೇಂಕಟಾದ್ರಿಯ ನೆನೆಯೆ ಪಾಪವಿನಾಶ |

ಶ್ರೀಸ್ವಾಮಿತೀರ್ಥದ ದಕ್ಷಪಾಶ್ರ್ವಪರೇಶ |

|| ಶ್ರೀ ಶೇಷಾಚಲೇಶ ||

ಅರ್ಚಿಪರ ಸಂರಕ್ಷಿಪುದು ನಿನ್ನಪಣವು ಆದುದರಿಂದ ಗೋಪಾನ |

ಆಸಿಯತಲೆಯಲಿ ತಡೆದು ಗೋವನು ಕಾಯ್ದ _

ಕರುಣಿಯೆ ಭಕ್ತವತ್ಸಲ |

ತುಚ್ಛಗೋಪನು ಭಯದಿ ಅಸುಬಿಡೆ

ಚೋಳರಾಯಗೆ ಶಾಪವಿತ್ತು |

ಅಚ್ಚುತನೆ ನೀದೇವ ಗುರುವಿನ ಸೇವೆಕೊಂಡು ನಿನ್ನರೂಪ |

ಸ್ವಚ್ಛಚಿನ್ಮಯ ಭೂವರಾಹನ ಸಹವಿನೋದ ಲೀಲೆಮಾಡಿ |

ಪ್ರೋಚ್ಚನಂದದಿ ಕ್ಷೇತ್ರ ಸಹಬಕುಳಾ ಯಶೋದೆಯ -

ಪಾಕಕಾಗಿ ಸ್ವೀಕರಿಸಿ ಹೇ ದಯಾನಿಧೇ ನಿತ್ಯತೃಪ್ತ 1

ಅಸಮ ಸತ್ಯವಾಗೀಶ |

ಜಗನ್ಮಾತೆಯೆಂದು ಪೇಳಿದಂತೆ ಆಕಾಶ |

ಕಂಡಪದ್ಮದಿ ಪದುಮ ಸುಮುಖವಿಲಾಸ |

ಶಿಶುವಕೊಂಡಳು ಧರಣಿ ಬಹು ಸಂತೋಷ |

|| ದಿಂದ ವಿಹಿತ ಆಶ ||

ಧರಣಿದೇವಿ ಆಕಾಶರಾಜನ ಸುತೆಪದ್ಮಾವತಿಯೆಂಬ ನಾಮದಿ |

ಪುರಿಯ ಹೊರಗೆ ಪುಷ್ಪವನದಲಿ ಸಖಿಯರೊಡನೆ ಆಡುವಾಗ |

ನಾರದನು ಬಹು ವೃದ್ಧರೂಪದಿ ಬಂದು -

ಹಸ್ತರೇಖೆ ನೋಡುತ |

ಶ್ರೀರಮಾಲಕ್ಷಣವ ಕಾಣುತ ಬ್ರಹ್ಮದೇವನ ತಾಯಿ ಅಂಗಿಯು |

ಮಾರಜನಕನೆ ಪತಿಯು ಎಂದು ಪೇಳಿತೆರಳೆ ಶಿರಿಯ ಸ್ಮರಿಸುತ |

ಏರಿ ಕುದುರೆಯ ವನದಿ ಪದ್ಮಾವತಿ ಸಂಗಡ -

ಆಟವಾಡಿದಿ ಹೇ ದಯಾನಿಧೇ ಶ್ರೀಶಸ್ವರಮಣ 2

ಧರಣಿಯೊಡನೆ ಸಂವಾದ |

ಮಾಡೆ ಬಕುಳಾ ಪೋಗೆ ನೀನು ಪುಳಿಂದ |

ವಿಧಿವತ್ಸರುದ್ರನು ದಂಡ ಗುಲ್ಮಬ್ರಹ್ಮಾಂಡ |

ಹಾರ ಗುಂಜಾಕಂಬುವೇಷದಿ ಪೋದಿಯೋ ಮುದದಿಂದ |

|| ಕಣಿಪೇಳ್ವ ಚೆಂದ ||

ಧರಣಿಪದ್ಮಗೆ ಕಣಿಯಪೇಳಿ ಮದುವೆ ನಿಶ್ಚಯಮಾಡಿ ಬಂದೆಯೋ |

ಭರದಿ ಶುಕ ಆಕಾಶರಾಜ ಲಗ್ನಪತ್ರವಕೊಡಲು ಬ್ರಹ್ಮ -

ಗರುಡ ಶೇಷ ಶಿವಾದಿಸುರ ಮುನಿಜನರ ಬಕುಳಾ ಲಕ್ಷ್ಮೀಸಹ ನೀ |

ಪೊರಟುಮಾರ್ಗದಿ ಶುಕಮುನಿಯ ನೈವೇದ್ಯ ಉಂಡು ಜನರತೃಪ್ತಿಸಿ |

ಸೇರಿಪುರಿಯ ಅಜರ ಮಂದಿರ ಪೋಲ್ವ -

ಮನೆಯಲಿ ಪದ್ಮಾವತಿಗೆ ಮಾಂಗಲ್ಯ ಧರಿಸಿದಿ |

ಸರಸಿಜಾಸನ ತಾತ ಪ್ರಸನ್ನ ಶ್ರೀನಿವಾಸನೆ

ವಿಶ್ವಪಾಲಕ ಹೇ ದಯಾನಿಧೇ ಶರಣು -

ಶರಣು ಹೇ ಸೌಭಾಗ್ಯದಾತಾ ಪ.3

||ಶ್ರೀ ಪ್ರಸನ್ನ ಅಣು ಶ್ರೀನಿವಾಸ ಕಲ್ಯಾಣ ಸಂಪೂರ್ಣ||

***

ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪ್ರಸನ್ನ ಶ್ರೀನಿವಾಸ ಕಲ್ಯಾಣ (ಅಣು)34

ಮೇರುಸುತ ಗಿರಿವಾಸ |ಶರಣಾದೆ ನಿನ್ನಲಿ ವಿಶ್ವಜನ್ಮಾದಿಕರ್ತನಿರ್ದೋಷ|||ಶ್ರೀ ಶ್ರೀನಿವಾಸ ||ವಿಷ್ಣು ಸರ್ವೋತ್ತಮ ಸಾಕ್ಷಾತ್ |ರಮಾದೇವಿ ತದಂತರಾ |ತದಧೌವಿಧಿವಾಣ್ಯೌಚ ತತ್ವವನು ಪ್ರತ್ಯಕ್ಷ ಭೃಗುಗೆ |ತಿಳಿಸಿ ಲಕ್ಷ್ಮಿಯ ಇಳೆಯ ಜನರಿಗೆ ಒಲಿಯೆ ಕಳುಹಿಸಿ |ವ್ಯಾಳಗಿರಿವಲ್ಮೀಕಪೊಕ್ಕಿ ಶ್ರೀವತ್ಸಶರಣು |ಶರಣು ಹೇ ಸರ್ವ ಹೃದ್ಗುಹಾಂತಸ್ಥವಿಶ್ವ ಪವೃಷಭಅಂಜನಶೇಷ|ವೇಂಕಟಾದ್ರಿಯ ನೆನೆಯೆ ಪಾಪವಿನಾಶ |ಶ್ರೀಸ್ವಾಮಿತೀರ್ಥದ ದಕ್ಷಪಾಶ್ರ್ವಪರೇಶ ||| ಶ್ರೀ ಶೇಷಾಚಲೇಶ ||ಅರ್ಚಿಪರ ಸಂರಕ್ಷಿಪುದು ನಿನ್ನಪಣವು ಆದುದರಿಂದ ಗೋಪಾನ |ಆಸಿಯತಲೆಯಲಿ ತಡೆದು ಗೋವನು ಕಾಯ್ದ _ಕರುಣಿಯೆ ಭಕ್ತವತ್ಸಲ |ತುಚ್ಛಗೋಪನು ಭಯದಿ ಅಸುಬಿಡೆಚೋಳರಾಯಗೆ ಶಾಪವಿತ್ತು |ಅಚ್ಚುತನೆ ನೀದೇವ ಗುರುವಿನ ಸೇವೆಕೊಂಡು ನಿನ್ನರೂಪ |ಸ್ವಚ್ಛಚಿನ್ಮಯ ಭೂವರಾಹನ ಸಹವಿನೋದ ಲೀಲೆಮಾಡಿ |ಪ್ರೋಚ್ಚನಂದದಿ ಕ್ಷೇತ್ರ ಸಹಬಕುಳಾ ಯಶೋದೆಯ -ಪಾಕಕಾಗಿ ಸ್ವೀಕರಿಸಿ ಹೇ ದಯಾನಿಧೇ ನಿತ್ಯತೃಪ್ತ 1ಅಸಮ ಸತ್ಯವಾಗೀಶ |ಜಗನ್ಮಾತೆಯೆಂದು ಪೇಳಿದಂತೆ ಆಕಾಶ |ಕಂಡಪದ್ಮದಿ ಪದುಮ ಸುಮುಖವಿಲಾಸ |ಶಿಶುವಕೊಂಡಳು ಧರಣಿ ಬಹು ಸಂತೋಷ ||| ದಿಂದ ವಿಹಿತ ಆಶ ||ಧರಣಿದೇವಿ ಆಕಾಶರಾಜನ ಸುತೆಪದ್ಮಾವತಿಯೆಂಬ ನಾಮದಿ |ಪುರಿಯ ಹೊರಗೆ ಪುಷ್ಪವನದಲಿ ಸಖಿಯರೊಡನೆ ಆಡುವಾಗ |ನಾರದನು ಬಹು ವೃದ್ಧರೂಪದಿ ಬಂದು -ಹಸ್ತರೇಖೆ ನೋಡುತ |ಶ್ರೀರಮಾಲಕ್ಷಣವ ಕಾಣುತ ಬ್ರಹ್ಮದೇವನ ತಾಯಿ ಅಂಗಿಯು |ಮಾರಜನಕನೆ ಪತಿಯು ಎಂದು ಪೇಳಿತೆರಳೆ ಶಿರಿಯ ಸ್ಮರಿಸುತ |ಏರಿ ಕುದುರೆಯ ವನದಿ ಪದ್ಮಾವತಿ ಸಂಗಡ -ಆಟವಾಡಿದಿ ಹೇ ದಯಾನಿಧೇ ಶ್ರೀಶಸ್ವರಮಣ 2ಧರಣಿಯೊಡನೆ ಸಂವಾದ |ಮಾಡೆ ಬಕುಳಾ ಪೋಗೆ ನೀನು ಪುಳಿಂದ |ವಿಧಿವತ್ಸರುದ್ರನು ದಂಡ ಗುಲ್ಮಬ್ರಹ್ಮಾಂಡ |ಹಾರ ಗುಂಜಾಕಂಬುವೇಷದಿ ಪೋದಿಯೋ ಮುದದಿಂದ ||| ಕಣಿಪೇಳ್ವ ಚೆಂದ ||ಧರಣಿಪದ್ಮಗೆ ಕಣಿಯಪೇಳಿ ಮದುವೆ ನಿಶ್ಚಯಮಾಡಿ ಬಂದೆಯೋ |ಭರದಿಶುಕಆಕಾಶರಾಜ ಲಗ್ನಪತ್ರವಕೊಡಲು ಬ್ರಹ್ಮ-ಗರುಡಶೇಷಶಿವಾದಿಸುರ ಮುನಿಜನರ ಬಕುಳಾ ಲಕ್ಷ್ಮೀಸಹ ನೀ |ಪೊರಟುಮಾರ್ಗದಿ ಶುಕಮುನಿಯ ನೈವೇದ್ಯ ಉಂಡು ಜನರತೃಪ್ತಿಸಿ |ಸೇರಿಪುರಿಯ ಅಜರ ಮಂದಿರ ಪೋಲ್ವ -ಮನೆಯಲಿ ಪದ್ಮಾವತಿಗೆ ಮಾಂಗಲ್ಯ ಧರಿಸಿದಿ |ಸರಸಿಜಾಸನತಾತಪ್ರಸನ್ನ ಶ್ರೀನಿವಾಸನೆವಿಶ್ವಪಾಲಕ ಹೇ ದಯಾನಿಧೇ ಶರಣು -ಶರಣು ಹೇ ಸೌಭಾಗ್ಯದಾತಾ ಪ. 3||ಶ್ರೀ ಪ್ರಸನ್ನ ಅಣು ಶ್ರೀನಿವಾಸ ಕಲ್ಯಾಣ ಸಂಪೂರ್ಣ||
*******