Showing posts with label ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ gopala vittala HYAANGE MAADALAYYA KRISHNA HOGUTIDE AAYUSHYA. Show all posts
Showing posts with label ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ gopala vittala HYAANGE MAADALAYYA KRISHNA HOGUTIDE AAYUSHYA. Show all posts

Sunday 7 November 2021

ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ ankita gopala vittala HYAANGE MAADALAYYA KRISHNA HOGUTIDE AAYUSHYA



ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ
ಮಂಗಳಾಂಗ ಭವಭಂಗ ಬಿಡಿಸಿ
ನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ||

ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ
ಭೂಸುರ ದೇಹದ ಜನುಮವು ಎನಗೆ ಸಂಭವಿಸಲಾಗಿ
ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ
ಲೇಶ ಸಾಧನವ ಕಾಣದೆ ದುಸ್ಸಹವಾಸದಿಂದಲೇ ದಿನದಿನ ಕಳೆದೆ ||೧||

ಶಶಿಮುಖಿ ಕನಕದ ಆಸೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ
ನಿಶಿಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ ಜೀಯ
ಉಸಿರಿದ ನೆಲವೊ ಸರ್ವಕಾಲ ನಿನ್ನೊಡೆತನ ಎಂಬುವ ಬಗೆಯನು ಅರಿಯದೆ ||೨||

ನೆರೆನಂಬಿದ ಪಾವಟೆಗಳು ಎಲ್ಲಾ ಸರಿದು ಪೋದವಲ್ಲ
ಮರಳಿ ಈ ಪರಿ ಜನುಮವು ಬರುವ ಭರವಸೆಯಂತೂ ಇಲ್ಲ
ಪರಿಪರಿ ವಿಷಯದ ಆಸೆಯು ನನಗೆ ಪಿರಿದು ಆಯಿತಲ್ಲ
ಹರಿಯೆ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲ ||೩||

ಅವನಿಯೊಳಗೆ ಪುಣ್ಯಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲ
ಪವನಾತ್ಮಕ ಗುರು ಮಧ್ವಶಾಸ್ತ್ರದ ಪ್ರವಚನ ಕೇಳಲಿಲ್ಲ
ತವಕದಿಂದ ಗುರುಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನಂದನ ಕೇಳಿದರುತ್ತರ ಕೊಡೆ ವಿವರ ಸರಕು ಒಂದಾದರಿಲ್ಲ ||೪||

ಭಾಗವತರೊಡಗೂಡಿ ಉಪವಾಸ ಜಾಗರ ಒಂದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಳಿದ ಹರಿಕಥೆ ಸಂಯೋಗವೆಂಬೋದಿಲ್ಲ
ನೀಗುವಂಥ ಭವಭಯವ ಭಕುತಿ ವೈರಾಗ್ಯವೆಂಬೋದಿಲ್ಲ
ಯೋಗಿವಂದ್ಯ ಗೋಪಾಲವಿಠಲ ತಲೆಬಾಗಿ ನಿನ್ನನೇ ಬೇಡಿಕೊಂಬೆ ||೫||
***

Hyange maadalayya krushna hogutide aayushya
Mangalanga bhavabhanga bidisi ninna Dingarigana maado ananga janaka||pa||

Yesu janumada sukrutada phalavo taanu janisalagi
Bhoosuradehada janumavu enage sambhavisideyagi|
Modateertha mata chihnitanagade doshake olagagi
Leshasadhanava kanade duhsahavasadindale dina dina kalede||1||

Shashimukha kanakada aashege beretu vasupati ninnadiya
Hasanagi ninna neneyade krupeya galisade kettenayya|
Nishehagalu sthiravendu tanuvanu poshisalashisi jeeya
Kusuride nelavo sarvakala nin odetanavembuva bageyanu ariyade||2||

Nerenambide paavatigalu ella saridu hodavalla
Marali E pariya janumavu baruva bharavaseyantu illa|
Paripari vishayada aasheyu enage kiridu aayitalla
Hariye jagadi neenobbanallade porevarinnaru illavalla||3||

Avani olage punyakshetra charisuva havanike enagilla
Pavanaatmaka guru madhwa shastrada pravachana kelalilla|
Tavakadinda guru hiriyara sevisi avara Olisalilla
Ravinandana kelidara uttara kode vivarasaraku ondaadaru illa||4||

Bhagavatarodagudi upavasa jagara ondudina maadalilla
Raagadi shukamuni pelda harikathe samyogavembodilla|
Neeguvanta bhava bhayava bhakuti vairagyavembodilla
Yogivandya gopalavithala…. Gopalavithala; vithala vithala gopalavithala
Yogivandya gopalavithala tale bhaagi ninnanne bedikombe||5||
***

pallavi

hyAnge mADalaiyya krishna hogutide Ayushya

anupallavi

mangalAnga bhava banga biDisi ninna

caraNam 1

DimgarIgana mADo anangajanakA esu janumada sukritada phalavo tAnu janisalAgi

caraNam 2

bhusuradehada janumavu enage sambhavisideyAgi modathIrthamata cihn itanAgade dOshake olagAgi

caraNam 3

lEsha sAdhanava kANade dussahavAsadindale dinadina kalede shashimukhi kanakada Ashege beretu vasupati nimmaDiya

caraNam 4

hasanAgi ninna neneyade kripeya galisade keTTenaiyyA nishihagalu stiravendu tanuvanu pOSisalASisi jIya

caraNam 5

usirida nelevo sarvakAlavu ninnODetanavembuva bageyanu ariyade nere nambida pAvaTigaly ella saidu pOdavallA

caraNam 6

maraLi I pari janumavu baruvA bharavaseyantu illA paripari vishayada Aseyu enage piridu AyitallA

caraNam 7

hariye jagadi nInObbanallade porevarinnAru illavallA avaniyolage puNyakeshtra carisuva havanike yenagillA

caraNam 8

pavanAtmakagurumadhvashAstrada pravacana kElalillA tavakadinda guruhiriyara sEvisi avara olisalillA

caraNam 9

ravinandana kElidaruttara koDe vivara saraku ondAdarillA bhAgavataroDaguDi upavAsa jAgara ondina mADalillA

caraNam 10

rAgadi shukamuni pElda harikatesamyOga vembodillA nIgurvanta bhava bhayava bhakuti vairAgyavembodillA
yOgivandya gOpAlaviTTala talebAgi ninnane bEDikombe
***


ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ
ಮಂಗಳಾಂಗ ಭವಭಂಗ ಬಿಡಿಸಿ 
ನಿನ್ನ ಡಿಂಗರಿಗನ ಮಾಡೋ ಅನಂಗಜನಕ ।। ಪ ।।

ಯೇಸು ಜನುಮದ ಸುಕೃತದ ಫಲವೋ ತಾನು ಜನಿಸಲಾಗಿ
ಭೂಸುರದೇಹದ ಜನುಮವು ಎನಗೆ ಸಂಭವಿಸಿದೆಯಾಗಿ ।
ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ
ಲೇಶಸಾಧನವ ಕಾಣದೆ ದುಃಸಹವಾಸದಿಂದಲೇ ದಿನ ದಿನ ಕಳದೆ ।।೧।।

ಶಶಿಮುಖ ಕನಕದ ಆಶೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ ।
ನಿಶೆಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ ಜೀಯ
ಕುಸುರಿದೆ ನೆಲವೋ ಸರ್ವಕಾಲ 
ನಿನ್ ಒಡೆತನವೆಂಬುವ ಬಗೆಯನು ಅರಿಯದೆ ।।೨।।

ನೆರೆನಂಬಿದ ಪಾವಟಿಗಳು ಎಲ್ಲಾ ಸರಿದು ಹೋದವಲ್ಲಾ
ಮರಳಿ ಈ ಪರಿಯ ಜನುಮವು ಬರುವ ಭರವಸೆಯಂತು ಇಲ್ಲಾ ।
ಪರಿಪರಿ ವಿಷಯದ ಆಶೆಯು ಎನಗೆ ಕಿರಿದು ಆಯಿತಲ್ಲಾ
ಹರಿಯೇ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲಾ ।।೩।।

ಅವನಿ ಒಳಗೆ ಪುಣ್ಯ ಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲಾ
ಪವನಾತ್ಮಕ ಗುರು ಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲಾ ।
ತವಕದಿಂದ ಗುರು ಹಿರಿಯರ ಸೇವಿಸಿ ಅವರ ಒಲಿಸಲಿಲ್ಲಾ
ರವಿನಂದನ ಕೇಳಿದರ ಉತ್ತರ ಕೊಡೆ 
ವಿವರಸರಕು ಒಂದಾದರು ಇಲ್ಲಾ ।।೪।।

ಭಾಗವತರೊಡಗೂಡಿ ಉಪವಾಸ ಜಾಗರ ಒಂದುದಿನ ಮಾಡಲಿಲ್ಲಾ
ರಾಗದಿ ಶುಕಮುನಿ ಪೇಳ್ದ ಹರಿಕಥೆ ಸಂಯೋಗವೆಂಬೋದಿಲ್ಲಾ ।
ನೀಗುವಂತ ಭವ ಭಯವ ಭಕುತಿ ವೈರಾಗ್ಯವೆಂಬೋದಿಲ್ಲಾ
ಯೋಗಿವಂದ್ಯ ಗೋಪಾಲವಿಠಲ…..ಗೋಪಾಲವಿಠಲ; 
ವಿಠಲ ವಿಠಲ ಗೋಪಾಲವಿಠಲ
ಯೋಗಿವಂದ್ಯ ಗೋಪಾಲವಿಠಲ 
ತಲೆ ಭಾಗಿ ನಿನ್ನನೇ ಬೇಡಿಕೊಂಬೆ ।।೫।।
***
ಗೋಪಾಲದಾಸರ ಒಂದು ಕೃತಿ – ನಮ್ಮ ತಪ್ಪನ್ನು ತೋರಿಸಿ ಎಚ್ಚರಿಸುವ ಕೃತಿ.

ನಮ್ಮ ಆಯುಷ್ಯ ಸೀಮಿತವಾಗಿದೆ.  ಅದನ್ನು ವ್ಯರ್ಥ ಮಾಡಬೇಡಿರೆಂದು ಸಾಧನಮಾಡಿಕೊಳ್ಳಿರೆಂದು ಸ್ವನಿಂದಾಸ್ತುತಿ ಮೂಲಕ ಹೇಳಿದ್ದಾರೆ.

ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ
ಮಂಗಲಾಂಗ ಭವಭಂಗವ ಬಿಡಿಸಿ ನಿನ್ನ ಡಿಂಗರಿಗನ್ನ ಮಾಡೋ ಅನಂಗ ಜನಕ ||ಪ||

ಯೇಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ
ಭೂಸುರದೇಹದ ಜನುಮವು ಎನಗೆ ಸಂಭವಿಸಿದೆಯಾಗಿ|
ಮೋದತೀರ್ಥ ಮತ ಚಿನ್ಹಿತನಗದೆ ದೋಷಕೆ ಒಳಗಾಗಿ
ಲೇಶಸಾಧನವ ಕಾಣದೆ ದುಸ್ಸಹವಾಸದಿಂದಲೆ ದಿನ ದಿನ ಕಳೆದೆ ||೧||

ಶಶಿಮುಖ ಕನಕದ ಆಶೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ|
ನಿಶೆ ಹಗಲು ಸ್ಥಿರವೆಂದು ತನುವನು ಪೋಶಿಸಲಾಶಿಸಿ ಜೀಯ
ಉಸುರಿದೆ ನೆಲವೊ ಸರ್ವಕಾಲ ನಿನ್ನೊಡೆತನವೆಂಬುವ ಬಗೆಯನು ಅರಿಯದೆ ||೨||

ನೆರೆನಂಬಿದೆ ಪಾವಟೆಗಳು ಎಲ್ಲ ಸರಿದು ಹೋದವಲ್ಲ
ಮರಳಿ ಈ ಪರಿಯ ಜನುಮವು ಬರುವ ಭರವಸೆಯಂತು ಇಲ್ಲ|
ಪರಿಪರಿ ವಿಷಯದ ಆಶೆಯು ಎನಗೆ ಕಿರಿದು ಆಯಿತಲ್ಲ
ಹರಿಯೆ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲ ||೩||

ಅವನಿ ಒಳಗೆ ಪುಣ್ಯಕ್ಷೇತ್ರ ಚರಿಸುವ ಹವನಿಕೆ ಎನಗಿಲ್ಲ
ಪವನಾತ್ಮಕ ಗುರು ಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲ|
ತವಕದಿಂದ ಗುರು ಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನಂದನ ಕೇಳಿದರುತ್ತರ ಕೊಡೆ ವಿವರ ಸರಕು ಒಂದಾದರಿಲ್ಲ ||೪||

ಭಗವತರೊಡಗೂಡಿ ಉಪವಾಸ ಜಾಗರ ಒಂದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಲ್ದ ಹರಿಕಥೆ ಸಮ್ಯೋಗವೆಂಬೋದಿಲ್ಲ |
ನೀಗುವಂತ ಭವ ಭಯವ ಭಕುತಿ ವೈರಾಗ್ಯವೆಂಬೋದಿಲ್ಲ
ಯೋಗಿವಂದ್ಯ ಗೋಪಾಲವಿಟ್ಠಲ ತಲೆ ಭಾಗಿ ನಿನ್ನನೇ ಬೇಡಿಕೊಂಬೆ ||೫||
***


ನಾವು ವರ್ಷವರ್ಷ ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತೇವೆ.  ಆದರೆ ಪ್ರತಿ ಹುಟ್ಟಿದ ಹಬ್ಬ ಆಚರಣೆ ನಮ್ಮ ಆಯುಷ್ಯವನ್ನು ಕಮ್ಮಿ ಮಾಡಿರುತ್ತದೆ.  ಆದ್ದರಿಂದ ಅನಂಗ (ಮನ್ಮಥನು ಕೃಷ್ಣ ರುಕ್ಮಿಣಿಯರ ಮಗನಾಗಿ ಹುಟ್ಟಿರುತ್ತಾನೆ) ಜನಕನಾದ ಕೃಷ್ಣನನ್ನು ಕೋರುತ್ತಾರೆ.

ಮಾನವನಾಗಿ ಹುಟ್ಟುವುದೇ ದುರ್ಲಭ.  ಎಷ್ಟೋ ಜನುಮದ ಪುಣ್ಯ ಫಲ ಮಾನವನಾಗಿ ಹುಟ್ಟಿರುವುದು ಅದರಲ್ಲೂ ಬ್ರಾಹ್ಮಣ ಜನ್ಮ ದೊರಕಿರುವಾಗ, ಆನಂದತೀರ್ಥರ ಮುದ್ರೆ ಇಲ್ಲದೆ ಏನೂ ಸಾಧನ ಮಾಡದೆ ದುಸ್ಸಹವಾಸದಿಂದ ಪ್ರತಿದಿನವನ್ನು ಕಳೆಯುತ್ತಿರುವೆ.  

ಹೆಣ್ಣು, ಹೊನ್ನಿನ ಆಸೆಗೆ ಒಳಗಾಗಿ, ಹಗಲು-ರಾತ್ರಿ ನಮ್ಮ ದೇಹ ಪೋಷಣೆಗೇ ಸೀಮಿತಗೊಳಿಸಿ, ಶ್ರೀಹರಿಯ ನೆನೆಯಲಿಲ್ಲ.

ಯಾವುದೇ ಪುಣ್ಯಕ್ಷೇತ್ರ ದರ್ಶನ ಮಾಡಲಿಲ್ಲ, ಆಚಾರ್ಯ ಮಧ್ವರ ಶಾಸ್ತ್ರದ ಪ್ರವಚನವನ್ನು ಎಂದೂ ಕೇಳಲಿಲ್ಲ, ಎಂದೂ ಗುರು ಹಿರಿಯರನ್ನು ಗೌರವಿಸಲಿಲ್ಲ, ಸೇವಿಸಲಿಲ್ಲ.  ರವಿನಂದನ (ಯಮ) ನಮ್ಮನ್ನು ಏನು ಸಾಧನ ಮಾಡಿದೆಯೆಂದು ಕೇಳಿದರೆ ನಮಗೆ ಉತ್ತರಿಸಲು ಏನೂ ಸರಕಿಲ್ಲ.  ಏಕಾದಶಿ ಉಪವಾಸವಾಗಲೀ, ಜಾಗರಣೆಯಾಗಲಿ, ಎಂದೂ ಮಾಡಲಿಲ್ಲ.  ಶುಕಾಚಾರ್ಯರ ನುಡಿಯಾದ ಭಾಗವತವನ್ನು ಕೇಳಲಿಲ್ಲ.  ವೈರಾಗ್ಯವಂತೂ ದೂರತೋಪಾಸ್ತ, ಬೇರೆ ದಾರಿ ಕಾಣದೆ ನಿನ್ನನ್ನೇ ಬೇಡಿಕೊಳ್ಳುವೆ ನನಗೆ ಜ್ಞಾನ, ಭಕ್ತಿ, ವೈರಾಗ್ಯವಿತ್ತು ಸಲಹಯ್ಯ ಎಂದು ಪ್ರಾರ್ಥಿಸುತ್ತಾರೆ.

by Narahari Sumadhwa
*****