Showing posts with label ರಕ್ಷಿಸೆವರ ಮಹಲಕ್ಷ್ಮೀಅಕ್ಷಯಗುಣಪೂರ್ಣೆ kamalanabha vittala. Show all posts
Showing posts with label ರಕ್ಷಿಸೆವರ ಮಹಲಕ್ಷ್ಮೀಅಕ್ಷಯಗುಣಪೂರ್ಣೆ kamalanabha vittala. Show all posts

Friday, 27 December 2019

ರಕ್ಷಿಸೆವರ ಮಹಲಕ್ಷ್ಮೀಅಕ್ಷಯಗುಣಪೂರ್ಣೆ ankita kamalanabha vittala

by ನಿಡಗುರುಕಿ ಜೀವೂಬಾಯಿ
ರಕ್ಷಿಸೆವರ ಮಹಲಕ್ಷ್ಮೀಅಕ್ಷಯಗುಣಪೂರ್ಣೆ ಪ

ಪಕ್ಷಿವಾಹನನ ವಕ್ಷಸ್ಥಳದಿರಕ್ಷಿತಳಾದೆ ಸುಲಕ್ಷಣದೇವಿ ಅ.ಪ

ನಿಗಮವೇದ್ಯನ ಗುಣಗಳ ಪೊಗಳುತಲಿಮಿಗೆ ಸಂತೋಷದಲಿಅಗಣಿತಾಶ್ಚರ್ಯನ ಕೊಂಡಾಡುತಲಿಬಗೆ ಬಗೆ ರೂಪದಲಿಖಗವರವಾಹನನಗಧರನಿಗೆ ಪ-ನ್ನಗ ವೇಣಿಯು ಬಗೆ ಬಗೆಯಿಂದರ್ಚಿಸಿಹಗಲಿರುಳೆಡೆ ಬಿಡದಲೆ ಹರಿಯನು ಬಹುಬಗೆಯಲಿ ಸೇವಿಪಭಾಗ್ಯದ ನಿಧಿಯೆ 1

ಇಂದಿರೆಶ್ರೀ ಭೂದುರ್ಗಾಂಬ್ರಣಿಯೇ ಸು-ಗಂಧ ಸುಂದರಿಯೆಇಂದುಶೇಖರ ಮೋಹಿಪ ಮೋಹಿನಿಯಸುಂದರವನೆ ಕಂಡುಚಂದಿರಮುಖ ಮುದದಿಂದಲಿ ಶ್ರೀಗೋ-ವಿಂದನು ತಾಳಿದ ಮೋಹಿನಿ ರೂಪವನೆಂದು ಮನದಿ ಆನಂದ ಪಡಲು ಸುರವೃಂದವ ಸ್ತುತಿಸೆ ಮುಕುಂದನ ರಮಣಿಯೆ 2

ಕಮಲಾನನೆಕಮಲಾಲಯೆಕಮಲಾಕ್ಷಿಕಮಲೋದ್ಭವೆ ಕಮಲೆಕಮಲಾಸನಪಿತನ ಸತಿಯೆ ಭಾರ್ಗವಿಯೆಕಮಲಾಂಬಿಕೆ ಪಿಡಿದಿಹಕಮಲಪುಷ್ಪಮಾಲೆಯು ಹರುಷದಿ ಶ್ರೀ-ಕಮಲನಾಭ ವಿಠ್ಠಲಗರ್ಪಿಸುತಲಿಕಮಲಪತ್ರದಳಾಕ್ಷಗೆ ನಮಿಸಿ ಸ್ವ-ರಮಣನ ಕರುಣಕೆ ಪಾತ್ರಳೆ ಸುಂದರಿ 3
*******