..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ನಂಬೋದ ಖರಿಯಾ ಶ್ರೀಹರಿಯಾ ಪಾದ ನಾ
ನಂಬೋದೆ ಖರಿಯಾ ಅಂಬುಜಾಂಬಕ ತನ್ನ
ನಂಬಿದ ಭಕುತರ
ಇಂಬಾಗಿ ಪೊರೆದೆನೆಂತೆಂಬ ವಾರುತಿ ಕೇಳಿ ಪ
ದೂರವಾದರೆ ತಾನು ನಾರಿಯ ಮೊರೆ ಕೇಳಿ
ಚೀರಿ ಕರೆದಳೆಂದು ಶೀರಿಗಳನೆ ಇತ್ತು
ಮೀರಿ ಪೊರೆದನೆಂಬೊ ವಾರುತಿ ಜಗದೊಳು
ಬೀರಿದನರಿಯಾ
ಬಿಂಕವ ಬಿಟ್ಟು ಸೇರಿಕೊ ಹರಿಯ
ದಾರಿ ಕಾಣದೆ ವನ ಸೇರಿದ ಕುವರನ್ನ
ಸಾರೆಗರೆದು ಸೌಖ್ಯ ಪೂರೈಸಿದನೆಂದು 1
ಕಾಡಾನೆ ವ್ರಜದೊಳು ಕೂಡಿದ್ದ ಗಜರಾಜ
ಗಾಡಾಹ ತಾಪದಿಂದ ಬಾಡಿ ನೀರಡಿಸಲು
ಗೂಢ ಸರೋವರ ನೋಡಿ ನೀರನೆ ಪೊಕ್ಕು
ಆಡಾಲು ಮದದಿ ನಕ್ರನು ಬಂದು ಪೀಡಿಸೆ ಭರದಿ
ಮೂಢ ನಾನೆಲೊ ಕೃಷ್ಣ ಮಾಡೊ ರಕ್ಷಣೆಯನ್ನು
ಓಡಿಬಂದಭಯವ ನೀಡಿದ ಪರಿ ನೋಡಿ 2
ಭೂಸುರ ವರನೊಬ್ಬನು ದೇಶ ದೇಶವ ತಿರುಗಿ
ಕಾಸು ಬಾಳದ ಸ್ತ್ರೀಯಳಿಗೆ ಆತನೆ ವಶವಾಗಿ
ಹೇಸಿಕಿಲ್ಲದೆ ಅಲ್ಲಿ ತಾ ಸೂನುಗಳ ಪಡಿಯೆ ಸಹ
ವಾಸರ ಕಳಿಯೆ ಕಾಲನು ಘೋರ ಪಾಶದಿ ಶಳಿಯೆ
ಆ ಸಮಯದಿ ಕೊನೆ ಕೂಸನ್ನೆ ಕೂಗಲುವಾಸುದೇವವಿಠಲ ತಾ ಸಲಹಿದನೆಂದು 3
***