Showing posts with label ಇಷ್ಟು ಚಿಂತೆಗೆ ಗುರಿ ಮಾಡಿದೆಯೊ ಹರಿಯೆ purandara vittala. Show all posts
Showing posts with label ಇಷ್ಟು ಚಿಂತೆಗೆ ಗುರಿ ಮಾಡಿದೆಯೊ ಹರಿಯೆ purandara vittala. Show all posts

Wednesday, 4 December 2019

ಇಷ್ಟು ಚಿಂತೆಗೆ ಗುರಿ ಮಾಡಿದೆಯೊ ಹರಿಯೆ purandara vittala

ರಾಗ ಮುಖಾರಿ ಛಾಪು ತಾಳ

ಇಷ್ಟು ಚಿಂತೆಗೆ ಗುರಿ ಮಾಡಿದೆಯೊ ಹರಿಯೆ ||ಪ||

ಸೃಷ್ಟಿ ಪರಿಪಾಲಕನೆ ಇದು ನಿನಗೆ ಸರಿಯೆ ||ಅ||

ಅರ್ಥವಿಲ್ಲದ ಚಿಂತೆ ಆಪ್ತರಿಲ್ಲದ ಚಿಂತೆ
ವ್ಯರ್ಥವಾಯಿತು ಬದುಕು ಎಂಬ ಚಿಂತೆ
ಅರ್ಥಿಯಲಿ ಇತ್ತ ಬಾರೆಂಬರಿಲ್ಲದ ಚಿಂತೆ
ಪಾರ್ಥರಿಲ್ಲದೆ ಆಡಿ ಮುಳುಗುವ ಚಿಂತೆ ||

ಘನ್ನ ಪಾತಕರ ಕೂಡಾಡಿ ಮುಳುಗುವ ಚಿಂತೆ
ಮನ್ನಿಸುವ ನೃಪರಿಲ್ಲದಿರುವ ಕಡುಚಿಂತೆ ||

ಸತಿಸುತರು ಬಾಂಧವರ ಸಲಹಬೇಕೆಂಬ ಚಿಂತೆ
ಮತಿಹೀನರ ಸಂಗ ಮಾಡ್ದ ಚಿಂತೆ
ಅತಿಶಯದ ಧರ್ಮಪುರಿಪರವಾಸುದೇವನೆ
ಪತಿಕರಿಸಿ ಪಾಲಿಸು ಪುರಂದರವಿಠಲ ||
*******