Showing posts with label ಕೃಷ್ಣ ಕೃಷ್ಣ ಎಂದಾದರೊಮ್ಮೆ ನೆನೆದರೆ ಮನಕೆ hayavadana. Show all posts
Showing posts with label ಕೃಷ್ಣ ಕೃಷ್ಣ ಎಂದಾದರೊಮ್ಮೆ ನೆನೆದರೆ ಮನಕೆ hayavadana. Show all posts

Friday, 13 December 2019

ಕೃಷ್ಣ ಕೃಷ್ಣ ಎಂದಾದರೊಮ್ಮೆ ನೆನೆದರೆ ಮನಕೆ ankita hayavadana

ಶ್ರೀ ವಾದಿರಾಜರು ರಚಿಸಿದ ಕೃತಿ

ಕೃಷ್ಣಾ ಕೃಷ್ಣಾ ಎಂದಾದರೊಮ್ಮೆ ನೆನೆದರೆ ಮನಕೆ
ದುಃಖ ಉಂಟೇನ ಮನಸ/

ಇನ್ನಾರು ಜ್ಞಾನ ದಿಂದ ಹರಿಗುರು ಕಥನ
ಸೇವಿಸಿ ಸರ್ವಕಾಟಲ//

ನಾನೆ ನಾನೆನ್ನಬೇಡ ಸಾವಿಗೆ ಅಂಜಬೇಡ/
ಸತ್ ಸಂಗ ಬಿಡಲೀಬೇಡ/

ಹಿರಿ ಗುರು ಕಥನ ಎಂದಿಗೂ ಮರೆಯಬೇಡ//೧//

ಶ್ರೀ ಕೃಷ್ಣ ಸೃಷ್ಟಿ ಕರ್ತ ಪುಟ್ಟಿಸಿ ಮಾಡುತಿಹ
ಇನ್ನೊಬ್ಬ ದಾವನಾರು ಅಜಭವ ಪಿತನೆಂದು/
ಒಬ್ಬನೆ ಕರೆಸಿಕೊಂಡ//

ತಾನೆ ಮೀನಾಗಿ ಬಂದು ಹೋಗಿ ದೈತ್ಯರ ಕೊಂದ
ಪ್ರಳಯ ಜಲಧಿಯೊಳ್ ಕೊಂಡಿಗೆಲವು ಕಟ್ಟಿ

ವೇದ ಉದ್ಧಾರ ಮಾಡಿ ತಾನೇ ತನ್ನ ವಿಶ್ವರೂಪ
ಮುನಿ ಮುನಿಗಳಿಗೆ ತೋರಿಸಿ ಕ್ರೀಡೆಯಿಂದ/

ಅಲ್ಲಿದಂತ ಮಚ್ಛ ಮೂರುತಿ ಸಕಲ ದುರಿತವು
ನಾಶಮಾಡೋ ಹಯವದನ//
**********

ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.