Showing posts with label ಪಾಪಿ ಬಲ್ಲನೆ ಪರರ ಸುಖ ದುಃಖವ purandara vittala. Show all posts
Showing posts with label ಪಾಪಿ ಬಲ್ಲನೆ ಪರರ ಸುಖ ದುಃಖವ purandara vittala. Show all posts

Thursday 5 December 2019

ಪಾಪಿ ಬಲ್ಲನೆ ಪರರ ಸುಖ ದುಃಖವ purandara vittala

ರಾಗ ಮುಖಾರಿ ಝಂಪೆ ತಾಳ

ಪಾಪಿ ಬಲ್ಲನೆ ಪರರ ಸುಖ ದುಃಖವ
ಕೋಪಿ ಬಲ್ಲನೆ ಶಾಂತ ಸುಗುಣದ ಘನವ||ಪ||

ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ
ಮೃತ್ಯು ಬಲ್ಲಳೆ ವೇಳೆ ಹೊತ್ತೆಂಬುದ
ತೊತ್ತು ಬಲ್ಲಳೆ ಮಾನಾಪಮಾನವೆಂಬುದನು
ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲವ
(/ ಕೊತ್ತಿ* ಬಲ್ಲುದೆ ಹಾಲು ಮೀಸಲೆಂಬುದನು)||೧||

ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ
ಶ್ವಾನ ಬಲ್ಲುದೆ ರಾಗ ಭೇದಂಗಳ
ಮೀನು ಬಲ್ಲುದೆ ನೀರು ಸೌಳು ಸ್ವಾದೆಂಬುದನು
ಹೀನ ಬಲ್ಲನೆ ಸುಗುಣ ದುರ್ಗುಣವನು ||೨||

ಬಾಳೆ ಬಲ್ಲುದೆ ಮರಳಿ ಫಲವಾಗೊ ಸುದ್ದಿಯನು
ಸೂಳೆ ಬಲ್ಲಳೆ ಗೆಳೆಯಗಿಹ ಬಡತನ
ಕೇಳ ಬಲ್ಲನೆ ಕಿವುಡನೇಕಾಂತ ಮಾತುಗಳ
ಹೇಳ ಬಲ್ಲನೆ ಮೂಕ ಕನಸು ಕಂಡುದನು ||೩||

ಕಾಗೆ ಬಲ್ಲದೆ ಒಳ್ಳೆ ಕೋಗಿಲೆಯ ಸ್ವರವನು
ಗೂಗೆ ಬಲ್ಲುದೆ ಹಗಲ ಹರಿದಾಟವ
ಜೋಗಿ ಬಲ್ಲನೆ ಮನೆಯೊಳಿಲ್ಲ ಉಂಟೆಂಬುದನು
ರೋಗಿ ಬಲ್ಲನೆ ಮೃಷ್ಟಾನ್ನದ ರುಚಿಯನು ||೪||

ಹೇಡಿ ಬಲ್ಲನೆ ರಣದ ಸಾಹಸದ ಶೌರ್ಯವನು
ಕೋಡಗವು ಬಲ್ಲುದೆ ರತ್ನದ ಬೆಲೆಯನು
ಬೇಡಿದುದ ಕೊಡಲು ಪುರಂದರ ವಿಠಲನಲ್ಲದೆ
ನಾಡದೈವಗಳೇನು ಕೊಡಬಲ್ಲವೋ ||೫||

(* ಕೊತ್ತಿ= ಬೆಕ್ಕು)
***

pallavi

pApi ballane parara sukha dukkhava gOpi ballane shAnta sugunada ghanava

caraNam 1

katte ballude hotta kastUriya parimaLava mrtyu ballaLe vELe hottembuda
tottu ballaLe mAnApamAnavembudanu matte ballude bekku hariya mIsalava

caraNam 2

hEnu ballude muDida hUvina parimaLava shvAna ballude rAga bhEdangaLa
mInu ballude nIru seLaLu svAtembudanu hIna ballane suguNa durguNavanu

caraNam 3

bALe ballude maraLi phalavAgo suttiyanu sULe ballaLe keLeyagiha baDatana
kELa ballane kivuDanEkAnta mAdugaLa hELa ballane mUka kanasu kaNDudanu

caraNam 4

kAge ballade oLLe kOgileya svaravanu kUge ballude hagala haridATava
jOgi ballane maneyoLilla uNDembudanu rOgi ballane mrSTnnada ruciyanu

caraNam 5

hEDi ballane raNada sAhasada shauryvanu kODagavu ballude ratnada beleyanu
bEDiduda koDalu purandara viTTalanallade nADadaivagaLEnu koDaballavO

***

yes
ಪಾಪಿ ಬಲ್ಲನೆ ಪರರ ಸುಖ ದುಃಖವ
ಕೋಪಿ ಬಲ್ಲನೆ ಶಾಂತ ಸುಗುಣದ ಘನವ||ಪ||

ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ
ಮೃತ್ಯು ಬಲ್ಲಳೆ ವೇಳೆ ಹೊತ್ತೆಂಬುದ
ತೊತ್ತು ಬಲ್ಲಳೆ ಮಾನಾಪಮಾನವೆಂಬುದನು
ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲವ ||೧||

ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ
ಶ್ವಾನ ಬಲ್ಲುದೆ ರಾಗ ಭೇದಂಗಳ
ಮೀನು ಬಲ್ಲುದೆ ನೀರು ಸೌಳು ಸ್ವಾದೆಂಬುದನು
ಹೀನ ಬಲ್ಲನೆ ಸುಗುಣ ದುರ್ಗುಣವನು ||೨||

ಹೇಡಿ ಬಲ್ಲನೆ ರಣದ ಸಾಹಸದ ಶೌರ್ಯವನು
ಕೋಡಗವು ಬಲ್ಲುದೆ ರತ್ನದ ಬೆಲೆಯನು
ಬೇಡಿದುದ ಕೊಡಲು ಪುರಂದರ ವಿಠಲನಲ್ಲದೆ
ನಾಡದೈವಗಳೇನು ಕೊಡಬಲ್ಲವೋ ||
********