Showing posts with label ಸಾಮಜಗಮನೆ ಕೇಳೀ ಮನ ನಿಲ್ಲದುಸ್ವಾಮಿಯ prasannavenkata. Show all posts
Showing posts with label ಸಾಮಜಗಮನೆ ಕೇಳೀ ಮನ ನಿಲ್ಲದುಸ್ವಾಮಿಯ prasannavenkata. Show all posts

Monday, 18 November 2019

ಸಾಮಜಗಮನೆ ಕೇಳೀ ಮನ ನಿಲ್ಲದುಸ್ವಾಮಿಯ ankita prasannavenkata

by ಪ್ರಸನ್ನವೆಂಕಟದಾಸರು
ಸಾಮಜಗಮನೆ ಕೇಳೀ ಮನ ನಿಲ್ಲದುಸ್ವಾಮಿಯ ಕರೆತಾರೆ ನೀರೆ ಪ.

ಯಾತರ ಜನುಮ ಇನ್ಯಾತರ ಬಾಳುವೆಪ್ರೀತಿಯಿಲ್ಲವೆ ಎನ್ನಲ್ಲಿ ಅಗಲಿಧಾತುಗುಂದಿಹ್ಯದು ಮತ್ಯಾತಕೆ ಸಲ್ಲವಮ್ಮನಾಥನಿದಿರಿನಲ್ಲಾಸೆ ಉದಿಸೆ 1

ಕಣ್ಣಕಜ್ಜಲನಿಲ್ಲದಿನ್ನೇನು ತರವಮ್ಮರನ್ನದುಡುಗೆಭಾರತೋರಪನ್ನಗವಾದವು ಎನ್ನ ಹೂವಿನಹಾರಮನ್ನಿಸಿ ಬರಲೊಲ್ಲನೆ ಎನ್ನೊಲ್ಲನೆ 2

ಕೂಡಿದವಳ ಹೀಗೆ ಕಾಡಬಹುದೇನಕ್ಕಬ್ಯಾಡ ಕಠಿಣ ಮನಸುಮುನಿಸುನೋಡೆ ಪ್ರಸನ್ನವೆಂಕಟ ಗಾಡಿಕಾರನು ನೆರದುಆಡಿದನೆ ಕಾಂತೆ ಏಕಾಂತ 3
*******