Showing posts with label ಕರದಾಗ ಬಾರದೇ ವೈದುಗ ಬಂದು ಬೋಧಿಸಿ tandevaradagopala vittala ankita suladi gopala dasa stutih. Show all posts
Showing posts with label ಕರದಾಗ ಬಾರದೇ ವೈದುಗ ಬಂದು ಬೋಧಿಸಿ tandevaradagopala vittala ankita suladi gopala dasa stutih. Show all posts

Thursday 5 August 2021

ಕರದಾಗ ಬಾರದೇ ವೈದುಗ ಬಂದು ಬೋಧಿಸಿ tandevaradagopala vittala ankita suladi gopala dasa stutih

 ..

kruti: tandevaradagopala vittala (ಪ್ರಹ್ಲಾದಗೌಡರು)

stutih on ಗೋಪಾಲದಾಸರು  suladi
ಕರದಾಗ ಬಾರದೇ ವೈದುಗ ಬಂದು ಬೋಧಿಸಿ ಮಾರ್ಗವ ತೋರಿಸಿ ಹೃದಯದಿ ಪಾದನಿಲ್ಲಿಸಿ ಮಂದನ ಪೋಷಿಸಿ ಭಂಗವ ಬಿಡಿಸುತಾ ಮಂಗಳ ಮೂರುತಿ ನಿನ್ನ ಮಹಿಮೆಗೆಣೆಗಾಣೆ ಧವಳ ಗುಣವಂತ ತಂದೆವರದಗೋಪಾಲವಿಠಲರೇಯನ ದಾಸನೆಂದೆನಿಸದೆಯನ್ನ 1

ಮಾವಿನ ವನದೊಳು ಪಾವಿನ ಪಾಶದಿ ಮೀನುವೊ ನರನಪನ್ನಗ ವೈರಿ ಬಂದು ಬನ್ನ ಬಿಡಿಸುವಂತೆ ಘನ್ನ ಭವ ಕೂಪದೊಳು ಬಿದ್ದು ಬನ್ನ ಪಡುತಿರೆ ಕಣ್ಣು ಕಾಣದೆ ಕರುಣವ ಬೀರುತ ಪಾಣಿಯ ಪಿಡಿದು ವೀಣಾವನಿತ್ತು ಗಾನವ ಪೇಳಿ ಗುಣವಂತನೆಂದೆನಿಸಿದೇ ಎನ್ನ ಅಣ್ಣಾ ಅಣ್ಣಾ ಭಾಗಣ್ಣ ಗಜಮುಖ ರೂಪದಿ ಬಂದು ಪಾಲಿಸಿದೈನಿನ್ನಾ ಕರುಣಾರಸಕೆಣೆಯುಂಟೆ ಯೆಣೆಯುಂಟೆ ನಿನ್ನ ದೇನಿಪರೊಳಗಿಟ್ಟುಶಿರಿಯರಮಣ ತಂದೆವರದಗೋಪಾಲನ ತೋರೋ 2

ನೂರಾರು ಸಾವಿರ ನಾರಿಯರೊಡಗೂಡಿ ಬೆಡಗು ಮಾಡೆ ನಾರಿಯಾಗಿ ನಿನ್ನಡಿಗಳ ಪೂಜಿಸಿ ಗರುಡನಂತೆ ನನ್ನ ಹೆಗಲೀನ ಕೂಡಿಸಿಕೊಂಡುತಿರುಗುವೆ ನೀತಿ ಕಪಿಯಂತೆ ನಿನ್ನ ಕಪ್ಪಾದಿ ವಲಿಸುವೆ ಕಮತವ ಮಾಡಿಸಿ ಮರ್ಮವ ಘಾಡಿಸಿ ಶರ್ಮವ ಗೂಡಿಸಿ ಚರ್ಮವ ತೊಡಿಸಿ ಕರ್ಮವ ಕೆಡಿಸಿಮೃಡನೊಡೆಯ ವಂದಿತ ತಂದೆವರದಗೋಪಾಲವಿಠಲನಡಿಗಳ ಧೇನಿಸುವಂತೆ ಮಾಡೋ 3

ಸುಂದರವದನನೆ ಮಂಗಳನಯನನೆ ಕಂದನ ಬಂಧಿಸಿ ದ್ವಂದ್ವವ ಪೊಂದಿಸಿ ಬಂದಿಖಾನೆಯೊಳಗೆ ಯಿಟ್ಟಾನಂದವ ಬಡಿಸುತ ಕರ್ಣಕುಂಡಲಧಾರಿ ಕಿರೀಟಾಂಕಿತ ಮುತ್ತುರತ್ನ-ಮಯೋಪೇತ ಚಿರಂಗ ಚಾಕಿಲಿರಂಗರಾಗರಸ ಸಾರಂಗ ರಸಪೂರಿತ ನವರಂಗ ಮೈಯ್ಯವ್ವ ವಜ್ರಾಂಕ ಭೂಷಿತ ಪದ್ಮಾಂಕಶೋಭಿತ ಪಾಶಾಂಕುಶಧರ ಗೋಪಾಲ ರಾಜನೆ ಅಂಬರ ಭೋಜನೆ ಕಂಬುಕಂಧರನಿಂದ ಡಿಂಗರಪಾಲಿಪ ಡಿಂಬದಿ ಪೊಳೆಯುವಅಂಬಾರಮಣಸುತ ಭೀಮಾಂತರ್ಯಾಮಿ ತಂದೆವರದಗೋಪಾಲ ವಿಠಲನ ನಿಜ ಕೊಂಡಾ 4

ಭಂಗಾರ ದೇಹದಿ ಶೃಂಗಾರ ಮಂದಿರ ಮಂಗಳ ಮಂಟಪಪಂಕಜ ಕರ್ಣಿಕಘುಂಘರು ಶ್ಯಂದನ ಘನಘನ ಶಬ್ದದಿಂ ರಂಭಾದಿ ವೇಶ್ಯೇರುನಂದಾದಿಂ ಬೆಳಗುವ ಮಂಗಳ ಆರತಿ ಕಂಗಳ ಬೆಳಕಲಿ ನೋಡುವ ನೋಟವೆಪಾಡುವ ಪಾಟವೇ ಆಡುವ ಆಟವೇ ಉಂಬುವ ಊಟವೇ ಕಾಡೂವೊ ಘೂಟವೇ ಪರಿಪರಿಯಿಂದಲಿಮಾಡುವುದೆಲ್ಲ ನಿನ್ನ ಮಹಾಪೂಜೇಗೇಳೈಯ್ಯ ಇರುವಂತೆ ಮಾತ್ರ ನಿನ್ನ ಕಾಡಿಬೇಡುವೆನೈ ಯಾಮಯಾಮಕೆ ನಿನ್ನ ಕರ್ಮಗಳೆಲ್ಲ ನೀನಾಗಿ ಕೊಂಡುನವನಿಧಿಗಿತ್ತು ಸುಪ್ರೀತನಾಗಿ ನಿಗಮ ನಿಧಿ ಕೃಷ್ಣಾಂತರ್ಯಾಮಿ ಲಕುಮಿ ಅರಸತಂದೆವರದಗೋಪಾಲವಿಠಲನ ವಾರಿಜದಲ್ಲಿ ತೋರೋ 5

ಜತೆ :ಆವಾಗ ಬಂದು ನೀ ಕಾವದಿರೇ ಸೇವಕನಾಗಲ್ಯಾಕೋ ಭಾವಜಪಿತ ತಂದೆವರದಗೋಪಾಲವಿಠಲರೇಯನ ದೂತ
***