Showing posts with label ಒಡವೆ ಹೋಯಿತು ಮನ ದೃಢವಾಯಿತು neleyadikeshava. Show all posts
Showing posts with label ಒಡವೆ ಹೋಯಿತು ಮನ ದೃಢವಾಯಿತು neleyadikeshava. Show all posts

Wednesday, 1 September 2021

ಒಡವೆ ಹೋಯಿತು ಮನ ದೃಢವಾಯಿತು ankita neleyadikeshava

 ..

ಒಡವೆ ಹೋಯಿತು ಮನ ದೃಢವಾಯಿತು ಪ


ಹಿಡಿದರೋಡುವ ಕಳ್ಳ ಬಿಡದೆ ಕದ್ದುಕೊಂಡು ಹೋದಅ


ಆರು ಜೋಡಿನ ಓಲೆಯಿತ್ತು ಮೂರು ಮುತ್ತಿನ ಮೂಗುತಿಯಿತ್ತುಚಾರುತರದ ಇಪ್ಪತ್ನಾಲ್ಕೆಳೆಯ ಸರವು ಒಂದಿತ್ತುಈರೈದು ತಾಳಿಗಳಿತ್ತು ಬಿರುದಿನ ಕಪ್ಪೆಂಟಿತ್ತುದಾರಿ ನೋಡಿಕೊಂಡು ಇದ್ದ ಛಾಯನೆಂಬ ಕಳ್ಳ ಕದ್ದ 1


ಎಪ್ಪತ್ತೆರಡು ಸಾವಿರ ಸೂತ್ರದ ಹಸ್ತಕಟ್ಟು ಎರಡಿತ್ತುಕಪ್ಪು ಬಿಳುಪು ಕೆಂಪು ವರ್ಣದ ಪದಕ ಒಂದಿತ್ತುಒಪ್ಪವಿತ್ತ ಹಸ್ತಕಡಗ ಆಶಾಪಾಶವೆರಡಿತ್ತುಒಪ್ಪವನ್ನು ಸಾಧಿಸಿ ನೇತ್ರನೆಂಬ ಕಳ್ಳ ಕದ್ದ 2


ಹುಟ್ಟು ಸಾವು ಎರಡು ಎಂಬ ಘಟ್ಟಿ ತೂಕದ ನಗವಿತ್ತುಕಷ್ಟ ಸುಖ ಕರ್ಮಗಳೆಂಬ ಸಂಚಿಗಳಿತ್ತುಅಷ್ಟು ಇಷ್ಟು ಚಿಲ್ಲರೆ ಒಡವೆ ಪೆಟ್ಟಿಗೆಯಲಿ ತುಂಬಿತ್ತುದೃಷ್ಟಿ ನೋಡಿಕೊಂಡು ಇದ್ದ ಧರ್ಮನೆಂಬ ಕಳ್ಳ ಕದ್ದ 3


ಎಲ್ಲ ಒಡವೆ ಹೋಯಿತಾದರು ಪುಲ್ಲಳಾಗಿ ಮೆರೆಯುತಾಳೆಚೆಲ್ವನೊಬ್ಬ ಪುರುಷನ ಕಂಡು ತಾಳಲಾರದೆಬಲ್ಲಿದಳು ಈಕೆ ಎಂದು ಇವಳ ಬಗೆ ತಿಳಿಯಿತೆಂದುಕೊಲ್ಲಬಾರದೆನುತ ಹೇಳಿ ಮನೆಯ ಬಿಟ್ಟು ಹೊರಗಟ್ಟಿದ4


ಇಂಥ ಒಡವೆ ಹೋಯಿತೆಂದು ಚೋದ್ಯಪಟ್ಟು ನೋಡುತಿರಲುತಂತ್ರ ಮಾಡಿ ಆದಿಕೇಶವ ಶ್ರೀಹರಿಯು ತಾನೆ ಬಂದುತಂತ್ರವನ್ನು ಹೇಳಿ ಜ್ಞಾನ ಮಾರ್ಗವನ್ನು ಬಿಟ್ಟುಕೊಟ್ಟುಸಂತಸದಿಂದ ಇರು ಎಂದು ಚಿಂತೆ ಬಿಡಿಸಿ ಸಲೆ ಸಲಹಿದ 5

***