ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿರೇವ ಪರೋ ಹರಿದೇವ ಗುರೋ ಹರಿಯೇ ಗುರುವೆಂದರವ್ಹಿರೋ ಪ
ಗುರುಮಧ್ವಪರ್ಹೇಳಿದ ನಿಜಕೀಲು ಅರಿತುಕೊಂಬುವಾದಿದೆವೆ ಮೇಲು ಪರಮ ಭಗತರನುಭವದ ಬಾಗಿಲು ಪರಗತಿ ಸಾಧನಕಿದೆ ಮಿಗಿಲು 1
ಹರಿಗುರುವೆರಡಾಗಿ ತೋರಿತು ನಾಮವು ಅರಿಯಲರಿಯದವಾಗಿದೆ ಭ್ರಮವು ತೋರುವದೊಂದೇ ಸಜ್ಜನರಿಗಿದೇ ನೇಮವು ಅರಿಕ್ಯುಳ್ಳವರಿಗಿದೇ ಕ್ರಮವು 2
ಹರಿಗುರು ಒಂದಾಗಿ ತೋರಿತು ನಿಜಘನ ತರಳ ಮಹಿಪತಿಸ್ವಾಮಿಯ ಕರುಣ ಗುರುಭಾನುಕೋಟಿತೇಜನೆ ಪರಿಪೂರ್ಣ ತೋರುವದೊಂದಾಗಿದೆ ನಿಜಖೂನ 3
***