Showing posts with label ಎಷ್ಟು ದುಷ್ಟನೆ ಯಶೋದೆ ನಿನ್ನ ಮಗ purandara vittala. Show all posts
Showing posts with label ಎಷ್ಟು ದುಷ್ಟನೆ ಯಶೋದೆ ನಿನ್ನ ಮಗ purandara vittala. Show all posts

Tuesday, 3 December 2019

ಎಷ್ಟು ದುಷ್ಟನೆ ಯಶೋದೆ ನಿನ್ನ ಮಗ purandara vittala

ರಾಗ ಶಂಕರಾಭರಣ. ಅಟ ತಾಳ

ಎಷ್ಟು ದುಷ್ಟನೆ, ಯಶೋದೆ, ನಿನ್ನ ಮಗ
ಅಷ್ಟು ಹೇಳ್ವೆನು ಕೇಳೇ ||ಪ||
ಸೃಷ್ಟಿಯೊಳಗೆ ಇಂಥ
ಚೇಷ್ಟೆಕೋರನ ಕಾಣೆ
ಹುಟ್ಟಿಸಿದಾ ಬ್ರಹ್ಮ ಗಟ್ಟಿಗ ಕಾಣಮ್ಮ ||ಅ.ಪ||

ತೊಟ್ಟು ಹಿಡಿದು ಎನ್ನ ತೊಟ್ಟ ಕುಪ್ಪಸ ಗಂಟು
ಬಿಟ್ಟು ಬೇಗ ಮುದ್ದಿಟ್ಟು ಕಠಿನ ಕುಚ
ಗಟ್ಯಾಗಿ ಹಿಂಡಿ ತಾನಷ್ಟು ಕುಡಿದು ಬಿಟ್ಟು
ನೆಟ್ಟನೆ ನಡೆದ ಶ್ರೀ ಕೃಷ್ಣನೆಂಬವನು ||

ಅಂಗಳದೊಳಗೆ ರಂಗೋಲೆ ಹಾಕುವಾಗ
ಶೃಂಗಾರದಂಗದ ಸೊಗಸ ನೋಡಿ
ಕಂಗಳ ಮುಚ್ಚಿನ್ನಾ ಹೆಂಗಳ ವ್ರತವನು
ಭಂಗ ಮಾಡಿದ ಶ್ರೀರಂಗನೆಂಬವನು ||

ನಿತ್ಯವಾಗಿ ಎನ್ನ ಅತ್ತೆಯೆಂದು ಕರೆವ
ಎತ್ತ ಹೋಗಲು ಎನ್ನ್ಹತ್ತಿರ ಕೂಡುವ
ಕತ್ತರಿಸೆನ್ನ ಸೀರೆ ಬತ್ತಲೆ ಮಾಡಿದ
ಚಿತ್ತ ಜಗತಿ ಪ್ರಿಯ ಪಿತನೆನಿಸಿಹನು ||

ಚಂದವಾಗಿದೆ ಇದು ಮಂದಿರವೆಂದು ಆ-
ನಂದದಲ್ಲಿ ಬಂದು ಮಲಗಿ ನಿನ್ನ
ಕಂದನಲ್ಲವೆಂದು ಚೆಂದುಟಿ ಸವಿಯುತ
ಮುಂದಿನ ಕಾರ್ಯ ಮುಕುಂದ ಮಾಡಿದನು ||

ಕೆಂಡದಂತವ ಎನ್ನ ಗಂಡ ಕಂಡರೆ ಹಿಡಿದು
ಕೊಂಡು ಚಂಡಿಕೆಯ ದಂಡಿಸದೆ ಬಿಡ, ಉ-
ದ್ದಂಡ ಪುರಂದರ ವಿಠಲರಾಯನು
ಭಂಡನೆ ಪುಂಡರೀಕಾಕ್ಷ ಶ್ರೀ ಕೃಷ್ಣ ||
***

pallavi

eSTu duSTane yashOde ninna maga aSTu hELvenu kELE

anupallavi

shrSTiyoLage intha cESTekOrana kANe huTTisidA brahma gaTTIga kANamma

caraNam 1

toTTu hiDidu enna toTTa kuppasa kaNDu biTTu bEga muddiTTu kaThina kuca
gaTyAgi hiNDi tAnaSTu kuDidu biTTu neTTane naDeda shrI krSNanembavanu

caraNam 2

angaLadoLage rangOla hAkuvAga shrngAradangada sogasa nODi
kangaLa muccinnA hengaLa vratavanu bhanga mADida shrIranganembavanu

caraNam 3

nityavAgi enna atteyendu kareva etta hOgalu enhattira kUDuva
kattarisyenna sIre battale mADida citta jagati priya pitanenisihanu

caraNam 4

candavAgide idu mandiravendu Anandadalli bandu malagi ninna
kandanallavendu cenduTi saviyuta mundina kArya mukunda mADidanu

caraNam 5

keNDadantavayenna gaNDa kaNDare hiDidu koNDu caDikeya daNDisade biDa
uddaNDa purandara viTTalarAyanu bhaNDane puNDarIkAkSa shrI krSNa
***