ಕಾಖಂಡಕಿ ಶ್ರೀ ಕೃಷ್ಣದಾಸರು
ಇದೋ ಶಿವ ಬಂದಾ ವೇದಾಂತ ವೇದದಯೋದದಿ ಬಂದಾ ಪ
ಇಂದುಧರನು ಬಂದಾಕಂದುಗೋರಳ ಬಂದಾ ನಂದಿವಾಹನ ಚಿದಾನಂದನು ಬಂದಾ1
ಶಂಭುಶಂಕರ ಬಂದಾ ಜಂಭಾರಿಸುತ ಬಂದಾ ಅಂಬಿಕಾರಮಣ ತ್ರಯಂಬಕ ಬಂದಾ2
ಕಂತುಹರನು ಬಂದಾ ಅಂತರಾತ್ಮನು ಬಂದಾ ಚಿಂತಿತಾರ್ಥೀವ ತ್ರಿಪುರಾಂತಕ ಬಂದಾ 3
ಗಂಗಾಧರನು ಬಂದಾ ಮಂಗಳಾಂಗನು ಬಂದಾ ಸಂಗ ರಹಿತ ಮಹಾಲಿಂಗನು ಬಂದಾ4
ಉರಗ ಭೂಷಣ ಬಂದಾ ಸುರರ ಪೋಷಣ ಬಂದಾ ಗುರು ಮಹಿಪತಿ ಪ್ರಭು ಕರುಣದಿ ಬಂದಾ5
***