Showing posts with label ರಾಘವೇಂದ್ರ ಪದ ಚೆನ್ನಾಗಿ ಭಜಿಸುವರಘವು tandevenkatesha vittala. Show all posts
Showing posts with label ರಾಘವೇಂದ್ರ ಪದ ಚೆನ್ನಾಗಿ ಭಜಿಸುವರಘವು tandevenkatesha vittala. Show all posts

Monday, 6 September 2021

ರಾಘವೇಂದ್ರ ಪದ ಚೆನ್ನಾಗಿ ಭಜಿಸುವರಘವು ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಬೇಗಡೆ ತಾಳ: ಅಟ 


ರಾಘವೇಂದ್ರ ಪದ ಚೆನ್ನಾಗಿ ಭಜಿಸುವರಘವು

ನೀಗಿಪೋಗುವುದಿದಕೆಹರಿಸಾಕಿಯೂ


ರಾಘವೇಂದ್ರರ ಧ್ಯಾನ ವರಸುಧಾರಸಪಾನ

ರಾಘವೇಂದ್ರರ ಸೇವೆ ದುರಿತಾಬ್ಧಿ ನಾವೆ

ರಾಘ್ವೇಂದ್ರರ ಕರುಣ ಜ್ಞಾನಾಂಕುರಾರ್ಪಣ

ರಾಘವೇಂದ್ರರಾಲೋಕ ಕರ್ಮಪರಿಪಾಕ 1

ರಾಘವೇಂದ್ರರ ಚರಿತೆ ಜ್ಞಾನ ಭಕ್ತಿಗಳೊರತೆ

ರಾಘವೇಂದ್ರರ ಲೀಲಾ ಪ್ರತಿವಾದಿಶೂಲ

ರಾಘವೇಂದ್ರರ ನಿಲಯ ದುಷ್ಟಗ್ರಹಗಳ ಪ್ರಳಯ

ರಾಘವೇಂದ್ರರಾಕಾರ ಭಕ್ತಮಂದಾರ 2

ರಾಘವೇಂದ್ರರ ಪೂಜ ಆನತರ ಸುರಭೂಜ

ರಾಘವೇಂದ್ರರ ಸ್ಮರಣ ಗಂಗಾವಿಹರಣ 

ರಾಘವೇಂದ್ರರ ಧ್ಯಾಸ ಮುಕ್ತಿಸ್ತ್ರೀವಿನ್ಯಾಸ 

ರಾಘವೇಂದ್ರರ ಮಂತ್ರ ಭವಭೀತಿಯಂತ್ರ 3

ರಾಘವೇಂದ್ರರ ಬೃಂದಾವನ ಸರ್ವಸುರಬೃಂದ

ರಾಘವೇಂದ್ರರ ಯಾಗಮಂಟಪವೇ ಸ್ವರ್ಗ

ರಾಘವೇಂದ್ರರ ಪಾದಉದಕ ಸಕಲಾಮೋದ

ರಾಘವೇಂದ್ರರ ಪ್ರೀತಿ ಅಸದೃಶವಿಭೂತಿ 4

ರಾಘವೇಂದ್ರರಮೂರ್ತಿ ಆಚಂದ್ರರವಿಕೀರ್ತಿ

ರಾಘವೇಂದ್ರರ ವಾಣಿ ಸಚ್ಚಾಸ್ತ್ರಸರಣಿ

ರಾಘವೇಂದ್ರರ ಭಕ್ತ ಪ್ರಾಣೇಶದಯಯುಕ್ತ

ರಾಘವೇಂದ್ರ ಪಾಲಾ ತಂದೆವೆಂಕಟೇಶವಿಠಲಾ 5

***

ಗಂಗಾವಿಹರಣ=ಗಂಗಾ ವಿಹಾರ; ಧ್ಯಾಸ=ಧ್ಯಾನ;