ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಲಕಾಲದಿ ಕರುಣಿಗಳರಸನಾದ ರಾಮಾ ಎನಬಾರದೇ | ಜಗ | ಪಾಲಕ ನಿನಗಿಹಪರಗಳ ನೀವಾ ಪ
ಪಂಚಾಗ್ನಿಯಲಿ ದೇಹ ಬಳಲಿಸುವದ್ಯಾತಕ | ರಾಮಾ ಎನಬಾರದೇ | ಪ್ರ | ಪಂಚ ತೊರೆದು ವನವಾಸ ಹಿಡವುದ್ಯಾಕ | ರಾಮಾ ಎನಬಾರದೇ || ಒಂಟಿ ಕಾಲಿನ ಯೋಗಧಾರಣವ್ಯಾಕ | ರಾಮಾ ಎನಬಾರದೇ | ಪುಣ್ಯ | ಸಂಚಿಸೆ ಕೃಚ್ಛೆ ಚಾಂದ್ರಾಯಣಿ ವೃತವ್ಯಾಕ | ರಾಮಾ ಎನಬಾರದೇ 1
ರಾಮಾ ಎನಬಾರದೇ | ಅ| ಖಂಡದಿ ಛಟಪಟ ಕರ್ತಬೋಧಗಳ್ಯಾಕ ರಾಮಾ ಎನಬಾರದೇ || ಮಂಡೆ ಬೋಳಿಸಿ ಭಿಕ್ಷಾನ್ನ ಬಯಸುವದ್ಯಾಕ | ರಾಮಾ ಎನಬಾರದೇ | ಜಗ | ಭಂಡರಂದದಿ ಬತ್ತಲೆ ತಿರುಗುವುದ್ಯಾಕ | ರಾಮಾ ಎನಬಾರದೇ 2
ಉಂಬಾಗ ಉಡುವಾಗ ಕೊಂಬು ಕೊಡುವಾಗ | ರಾಮಾ ಎನಬಾರದೇ | ಸರ್ವಾ | ರಂಭದಿ ಸತಿಸುತಲಾಲನೆ ಮಾಳ್ಪಾಗ | ರಾಮಾ ಎನಬಾರದೇ || ತಿಂಬು ತಾ ಕಳಿಸುತಾ ಎಡಹುತಾಣಕಿಸುತಾ ರಾಮಾಎನಬಾರದೇ | ಇದು | ಸಂಭ್ರಮದಲಿ ಮಹಿಪತಿ ಸುತ ಸಾರಿದಾ ರಾಮಾ ಎನಬಾರದೇ 3
****