Showing posts with label ನವಸುವರ್ಣದಾ ಪರಿಯ ಹೊಳೆವ ಕೆಂಜೆಡೆಯಲೀ ದಿವಿಜ gurumahipati. Show all posts
Showing posts with label ನವಸುವರ್ಣದಾ ಪರಿಯ ಹೊಳೆವ ಕೆಂಜೆಡೆಯಲೀ ದಿವಿಜ gurumahipati. Show all posts

Wednesday, 1 September 2021

ನವಸುವರ್ಣದಾ ಪರಿಯ ಹೊಳೆವ ಕೆಂಜೆಡೆಯಲೀ ದಿವಿಜ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ನವ ಸುವರ್ಣದಾ ಪರಿಯ ಹೊಳೆವ ಕೆಂಜೆಡೆಯಲೀ ದಿವಿಜ ನದಿಯ ನಿರುತ ಧರಿಸೀ ಮುಂದಲಿಯ ಲೀ ತವ ಶೀತಾಂಶೂನಾ ಕಳೆಯ ತಿಲಕಾ ಮಾಡಿ ಮೆರೆವಾ ಭವ ಭಯ ನಿವಾರಿಸಿ ಹೊರೆವಾ 1 

ಮದನ ನಳಿದಾ ಭಾಲನಯನಾ ಸುವಿಧ್ಯದಿ ಮೊರೆಹುಗಲು ವಲುವಾನಂದನಯನಾ ಫಣಿ ಭೂಷಣ ಮಾರಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 2 

ಠವ ಠವಿಸುವ ಮುನಿಯ ಮನೋಹರ ಪಂಚ ವದನಾ ರವಿ ಕೋಟಿ ತೇಜದಿರುವಾಘನ ಕಾರುಣ್ಯ ಸದನಾ ಭವಾನೀ ಯಡದ ತೋಡಿಯಲಿರಿಸೀ ಕೊಂಡು ಮೆರೆವಾ ಭವ ಭಯ ನಿವಾರಿಸಿ ಹೊರೆವಾ 3 

ಧವಲೀಸುತಿಹ ತನು ರೂಚಯ ಕರ್ಪೂರ ಪರಿಯಾ ತವಕದಿಂದುಟ್ಟಾ ಉಡುಗಿ ಹರನಾ ಚರ್ಮ ಕರಿಯಾ ಸವಿಭೂತಿಯ ಸುಧರಿಸಿ ತಪವೇಷದಿ ಮೆರೆ ವಾ ಭವ ಭಯ ನಿವಾರಿಸಿ ಹೊರೆವಾ 4 

ಭುವನತೃಯದಾ ಸುರನರೋರಗ ಪೂಜಿಸುತಿಹಾ ಪಾದ ದ್ವಿತೀಯಾ ಅವಿನಾವಾ ದೇವರ ಜನಗಿರಿ ವಾಸವಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 5 

ತ್ರಿವಿಧ ತಾಪವಾಹರಿಸುವದು ಹರಯಂದ ಭರವಿದೀ ಭವಯನ್ನ ಲಾಗಾ ಸುಖಗರೆವ ಸಾನಂದ ವರದೀ ಭವ ಭಯ ನಿವಾರಿಸಿ ಹೊರೆ ವಾ 6 

ಸವಾರೀಧರನಾವರಣದಿರುವಾ ಕಪ್ಪುಗೋರಳಾ ತ್ರಿವಿಷ್ಟಾಪರಿಯಾ ಪದವ ಮುನಿವಾ ತ್ರಿಶೂಲ ಸರಳಾ ಕವಿಬೋಧಿಸುವಾ ಡುವರ ಸೂತ್ರದ ಕೈಯ್ಯಾ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 7 

ಶಿವಷ್ಟಕವನು ಹೃದಯ ಪತ್ರ ಮ್ಯಾಲ ಬರವಾ ಅವನಿಷ್ಟಾರ್ಥವಾ ಕುಡುತ ದುಷ್ಕøತ ಮೂಲಹರಿವಾ ಅವಿದ್ಯೋಡಿ ಸುವಾ ಗುರು ಮಹಿಪತಿಯಾಗಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 8

****