Showing posts with label ಚಿಪ್ಪಗಿರಿಯ ನಿಲಯ ಸಲಹೊ others vijaya dasa stutih. Show all posts
Showing posts with label ಚಿಪ್ಪಗಿರಿಯ ನಿಲಯ ಸಲಹೊ others vijaya dasa stutih. Show all posts

Friday, 27 December 2019

ಚಿಪ್ಪಗಿರಿಯ ನಿಲಯ ಸಲಹೊ others vijaya dasa stutih

ಚಿಪ್ಪಗಿರಿಯ ನಿಲಯ ಸಲಹೊ
ಅಪ್ಪ ವಿಜಯರಾಯ ||ಪ||
ಸರ್ಪಶಯನ ಕಂದರ್ಪ ಪಿತನ ದಯ
ತಪ್ಪದೆ ಪೊಂದಿಹ ಅಪ್ರತಿಮಾರ್ಯರೆ ||ಅಪ||

ಹರಿ ಸೇವೆಯ ಬಯಸಿ ಜನಿಸಿದೆ ಪರಿ ಪರಿ ಅವತರಿಸಿ
ಕರುಣದಿಂದ ಹರಿ ಶರಣರ ಪೊರೆಯಲು
ಧರೆಯೊಳು ಚೀಕಲಪರಿವಿಲಿ ಉದಿಸಿದೆ ||೧||

ಭುಜಗ ಶಯನ ಹರಿಯ ನಿರುತ ಭಜಿಪ ಸುಜನ ಪ್ರೀಯ
ಹೃಜಿಸುತ ತೈಜಸ ನಿಜಗುರು ತೋರಲು
ವಿಜಯವಿಠ್ಠಲ ಹೃದಂಬುಜದಿ ನಿಮ್ಮೊಳು ನಿಂತ ||೨||

ವಿಜಯತೀರ್ಥ ಸ್ನಾನ ದರುಶನ ಋಜುಪಥ ಸೋಪಾನ
ವ್ರಜತಮ ಕಳೆವುದು ಕುಜನಕೆ ದೊರಕದು
ಸುಜನರೀ ಯಾತ್ರೆಯ ಯತಿಪರೋ ಸತತದಿ ||೩||

ಶ್ರೀಪತಿ ರಮಾಕಾಂತ ವಿಠ್ಠಲನ ಶ್ರೀಪದ ಹೃದಯವಂತ
ರೂಪನೋಳ್ಪ ಮುನಿ ತಾಪವಳಿದು ಭವ
ಕೂಪಕೆ ತಳ್ಳದಿರು ತಾಪಸರೊಡೆಯನೆ ||೪||
********