(ಮಂಗಳ ಪದ)
ಸೃಷ್ಟಿ ಸ್ಥಿತಿ ಕಾರಣಕೆ ಕರ್ತನಾದ ಶ್ರೀ ವಿಷ್ಣುವಿಗೆ ಜಯ ಮಂಗಳಂ ಪ
ಮಚ್ಛ ಕಚ್ಛಪ ವರಾಹಾದಿ ಅವತಾರ
ಸ್ವೇಚ್ಛೆಯಾದರಿಸಿದವಗೆ ನೆಚ್ಚಿ ನೆನೆಯುವರು ಮನದಿಸ್ಟೆಪೂರಿಸುವ ಶ್ರೀ
ಅಚ್ಯುತಗೆ ಜಯ ಮಂಗಳಂ ಹರಿಗೆ 1
ಸಿರಿ ಬ್ರಹ್ಮವಾಯು ಮೊದಲಾದ ಸನಕಾದ್ಯರಿಂ
ಸ್ತೋತ್ರಗೊಳ್ವಗೆ ಮಂಗಳಂ
ನಾರದ ಶುಕಾದಿ ಮುನಿಗಳು ಪಠಿಸುವ ಪುರಾಣ
ಪುರುಷೋತ್ತಮಗೆ ಮಂಗಳಂ ಹರಿಗೆ 2
****