Showing posts with label ಗುರುನಾಮ ಸ್ಮರಿಸಿರೊ ಶ್ರೀಗುರುನಾಮ ಸುರಮುನಿ mahipati GURUNAAMA SMARISIRO SRI GURUNAMA SURAMUNI. Show all posts
Showing posts with label ಗುರುನಾಮ ಸ್ಮರಿಸಿರೊ ಶ್ರೀಗುರುನಾಮ ಸುರಮುನಿ mahipati GURUNAAMA SMARISIRO SRI GURUNAMA SURAMUNI. Show all posts

Thursday, 2 December 2021

ಗುರುನಾಮ ಸ್ಮರಿಸಿರೊ ಶ್ರೀಗುರುನಾಮ ಸುರಮುನಿ ankita mahipati GURUNAAMA SMARISIRO SRI GURUNAMA SURAMUNI



ಗುರು ನಾಮ ಸ್ಮರಿಸಿರೊ ಶ್ರೀಗುರುನಾಮ
ಸುರಮುನಿ ಜನರ ಪ್ರಿಯವಾದ ನಾಮ ||ಪ||

ಬ್ರಹ್ಮವಿಷ್ಣುರುದ್ರರಿಗಿದೇ ನಿಜನಾಮ
ಪ್ರೇಮದಿಂದ ಸ್ಮರಿಸುವುದು ಇದೇ ನಾಮ
ಸಮಸ್ತ ಲೋಕಕ್ಕೆ ಸಾರವಾದ ನಾಮ
ನೇಮದಿಂದ ತಾರಿಸುವ ದಿವ್ಯನಾಮ ||೧||

ಸಕಲಾಗಮ ಪೂಜಿತಕಿದೇ ನಾಮ
ಏಕೋಮಯವಾಗಿ ತೋರುವದಿದೇ ನಾಮ
ಶುಕನಾಮ ದೇವರಿಗಿದೇ ನಿಜನಾಮ
ಸುಖ ಸರ್ವರಿಗೆ ತೋರುವ ಗುರುನಾಮ ||೨||

ಕರ್ಮಬಂಧನ ಛೇದಿಸುವದಿದೇ ನಾಮ
ಕರ್ಮದೋರಿ ಕೊಡುವುದು ಗುರುನಾಮ
ಬ್ರಹ್ಮಾನಂದ ಸುಖದೋರುವಾನಂದ ನಾಮ
ಧರ್ಮ ಜಾಗಿಸಿ ಕೊಡುವುದೀ ಗುರುನಾಮ ||೩||

ಅಜಮಿಳಗ ತಾರಿಸಿದುದೀ ನಾಮ
ಗಜಭಯ ಪರಿಹರಿಸಿದಿದೇ ನಾಮ
ಸುಜನರಿಗೆ ಪ್ರಸನ್ನವಾದ ನಾಮ
ಮೂಜಗಕೆ ತಾ ಮುಖ್ಯವಾದ ಗುರುನಾಮ ||೪||

ಅಹಲ್ಯ ಉದ್ಧರಣ ಮಾಡಿದುದಿದೇ ನಾಮ
ಪ್ರಹ್ಲಾದನ ಪ್ರಾಣ ಕಾಯ್ದಿದೇ ನಾಮ
ಫಲುಗುಣಗ ತಾ ಪಕ್ಷವಾದುದಿದೇ ನಾಮ
ಒಲಿದು ಧ್ರುವಗ ಢಳವಿತ್ತ ಗುರುನಾಮ ||೫||

ಅಗಣಿತ ಗುಣ ಪರಿಪೂರ್ಣವಾದ ನಾಮ
ಸುಗಮ ಸುಪಥಸಾಧನ ಇದೇ ನಾಮ
ಯೋಗಿಜನ ಸೇವಿಸುವ ನಿಜನಾಮ
ನಿರ್ಗುಣಾನಂದವಾಗಿಹ ಗುರುನಾಮ ||೬||

ಸೂರ್ಯಚಂದ್ರ ಸಮಸ್ತವಂದ್ಯ ಇದೇ ನಾಮ
ಕಾರ್ಯಕಾರಣವಾಗಿಹ ಇದೇ ನಾಮ
ತೂರ್ಯಾವಸ್ಥೆಯೊಳಗೆ ಸೂರಿಗೊಂಬೋ ನಾಮ
ತರಳ ಮಹಿಪತಿ ತಾರಕ ಗುರುನಾಮ ||೭||
***

ರಾಗ ತೋಡಿ , ದೀಪಚಂದಿ ತಾಳ (raga tala may differ in audio)

ಗುರುನಾಮ ಸ್ಮರಿಸಿರೊ ಶ್ರೀಗುರುನಾಮ ಸುರುಮುನಿಜರ ಪ್ರಿಯವಾದ ನಾಮ ಪ 


ಬ್ರಹ್ಮ ವಿಷ್ಣುರುದ್ರರಿಗಿದೆ ನಿಜನಾಮ ಪ್ರೇಮದಿಂದ ಸ್ಮರಿಸುವರು ಇದೆ ನಾಮ ಸಮಸ್ತ ಲೋಕಕ್ಕೆ ಸಾರವಾದ ನಾಮ ನೇಮದಿಂದ ತಾರಿಸುವ ದಿವ್ಯನಾಮ 1 

ಸಕಲಾಗಮ ಪೂಜಿತರಿದೆ ನಾಮ ಏಕೋಮಯವಾಗಿ ದೋರುವದಿದೆನಾಮ ಶುಕವಾಮ ದೇವರಿಗಿದೆ ನಿಜ ನಾಮ ಸುಖ ಸರ್ವರಿಗೆ ದೋರುವ ಗುರುನಾಮ 2 

ಕರ್ಮಬಂಧನ ಛೇದಿಸುವದಿದೆ ನಾಮ ಕರ್ಮದೋರಿ ಕೊಡುವದೀ ಗುರುನಾಮ ಬ್ರಹ್ಮಾನಂದ ಸುಖದೊರುವಾನಂದ ನಾಮ ಧರ್ಮ ಜಾಗಿಸಿಕೊಡುವದೀ ಗುರುನಾಮ 3 

ಅಜಮಿಳಗೆ ತಾರಿಸಿದಿದೇ ನಾಮ ಗಜಭಯ ಪರಿಹರಿಸಿದಿದೆ ನಾಮ ಸುಜನರಿಗೆ ಸುಪ್ರಸನ್ನವಾದ ನಾಮ ಮೂಜಗಕೆ ತಾಮುಖ್ಯವಾದ ಗುರುನಾಮ 4 

ಅಹಲ್ಯ ಉದ್ಧರಣ ಮಾಡಿದುದಿದೆ ನಾಮ ಪ್ರಲ್ಹಾದÀನ ಪ್ರಾಣಗಾಯಿದಿದೆ ನಾಮ ಫಲುಗುಣ ತಾ ಪಕ್ಷವಾದದುದಿದೆ ನಾಮ ಒಲಿದು ಧ್ರುವಗಥಳವಿತ್ತ ಗುರುನಾಮ 5 

ಅಗಣಿತ ಗುಣ ಪರಿಪೂರ್ಣವಾದ ನಾಮ ಸುಗಮ ಸುಪಥಸಾಧನ ಇದೆ ನಾಮ ಯೋಜನ ಸೇವಿಸುವ ನಿಜನಾಮ ನಿರ್ಗುಣಾನಂದವಾಗಿಹ್ಯ ಗುರುನಾಮ6 

ಸೂರ್ಯಚಂದ್ರ ಸಮಸ್ತವಂದ್ಯ ಇದೆ ನಾಮ ಕಾರ್ಯಕಾರಣವಾಗಿಹ್ಯ ವಿದೆ ನಾಮ ತೂರ್ಯಾವಸ್ಥೆ ಯೊಳಗೆ ಸೂರಿಗೊಂಬು ನಾಮ ತರಳಮಹಿಪತಿ ತಾರಕ ಗುರುನಾಮ 7

***