by ಬಾಗೇಪಲ್ಲಿ ಶೇಷದಾಸರು
ರಾಗ - : ತಾಳ -
ಅಲ್ಲಿ ನೋಡಿ ಶ್ರೀನಿವಾಸನ ll ಪ ll
ಫುಲ್ಲನಾಭನು ಸಿರಿನಲ್ಲೆಯಿಂದೊಪ್ಪಿರುವದ ನೋಡಿ ll ಅ ಪ ll
ಶೇಷನ ಫಣೆಯೊಳು ವಾಸವ ಮಾಡುತ
ದಾಸಜನರ ಮನ ತೋಷಪಡಿಸುವುದ ನೋಡಿ ll 1 ll
ಆದರದಿಂದಲಿ ಸಾಧನ ಪುರದೊಳು
ಸಾಧು ಜನರ ಮನ ಮೋದಪಡಿಸುವುದ ನೋಡಿ ll 2 ll
ಪ್ರಾಣನಾಥವಿಟ್ಠಲನು ಸಾನುರಾಗದಲಿ ವೇಣು
ಗಾನವ ಮಾಡುತ ಸಿರಿ ಮಾನಿನಿಯಿಂದೊಪ್ಪಿರುವುದ ನೋಡಿ ll 3 ll
***
ಪುಲ್ಲನಾಭನು ಸಿರಿನಲ್ಲೆಯಿಂದೊಪ್ಪಿರುವುದ ನೋಡಿ ||ಅ||
ಶೇಷನ ಫಣೆಯೊಳು ವಾಸವ ಮಾಡುತ
ದಾಸಜನರ ಮನ ತೋಷಪಡಿಸುವುದ ನೋಡಿ||೧||
ಆದರದಿಂದಲಿ ಸಾಧನಪುರದೊಳು
ಸಾಧುಜನರ ಮನ ಮೋದಪಡಿಸುವುದ ನೋಡಿ||೨||
ಪ್ರಾಣನಾಥವಿಠಲನು ಸಾನುರಾಗದಲಿ ವೇಣು-
ಗಾನವ ಮಾಡುತ ಸಿರಿಮಾನಿನಿಯಿಂದೊಪ್ಪಿರುವುದ ನೋಡಿ ||೩||
***