Friday 27 December 2019

ಅಲ್ಲಿ ನೋಡಿ ಶ್ರೀನಿವಾಸನ ಪುಲ್ಲನಾಭನು ankita prananatha vittala

by ಬಾಗೇಪಲ್ಲಿ ಶೇಷದಾಸರು
ಅಲ್ಲಿನೋಡಿ ಶ್ರೀನಿವಾಸನ ||ಪ||

ಪುಲ್ಲನಾಭನು ಸಿರಿನಲ್ಲೆಯಿಂದೊಪ್ಪಿರುವುದ ನೋಡಿ ||ಅ||

ಶೇಷನ ಫಣೆಯೊಳು ವಾಸವ ಮಾಡುತ  
ದಾಸಜನರ ಮನ ತೋಷಪಡಿಸುವುದ ನೋಡಿ||೧||

ಆದರದಿಂದಲಿ ಸಾಧನಪುರದೊಳು
ಸಾಧುಜನರ ಮನ ಮೋದಪಡಿಸುವುದ ನೋಡಿ||೨||

ಪ್ರಾಣನಾಥವಿಠಲನು ಸಾನುರಾಗದಲಿ ವೇಣು-
ಗಾನವ ಮಾಡುತ ಸಿರಿಮಾನಿನಿಯಿಂದೊಪ್ಪಿರುವುದ ನೋಡಿ ||೩||
********


No comments:

Post a Comment