ankita ತಂದೆವೆಂಕಟೇಶವಿಠಲ
ರಾಗ: ಪೀಲು ತಾಳ: ಆದಿ
ಸ್ಮರಿಸಿ ಬಾಳ್ವೆನೂ ಪದ ನಿರೇಜದ್ವಯವನೂ
ಪೊರೆಯಲೆಮ್ಮನು ಗುರುಸುಧೀಂದ್ರತನುಜನೂ ಪ
ಜ್ಞಾನ ಭಕುತಿಯಾ ಸಮೀಚೀನರಕ್ತಿಯಾ
ಧ್ಯಾನಯುಕ್ತಿಯಾ ಕೊಡುವ ಭವ್ಯವ್ಯಕ್ತಿಯಾ 1
ಪರಮಪಾವನಾ ಯಶೋಧರ ಸುಮುನಿಪನ
ಪುರುಟಶಯನನ ಉದರಪುಣ್ಯರತ್ನನ 2
ವ್ಯಾಸರಾಜನಾ ಸರ್ವಕ್ಲೇಶ ಭಂಜನ
ಭಾಸ್ವದಾರ್ಯನ ಶ್ರೀ ಪ್ರತೀಪಜಾತನ 3
ರಾಘವೇಂದ್ರನ ಸಕಲಯೋಗಸಾಂದ್ರನ
ಮಾಗಧಕಾಲನ ಸುಮತ ಗಗನಚಂದ್ರನ 4
ಈಶ ತಂದೆ ಶ್ರೀ ವೆಂಕಟೇಶವಿಠಲನ
ದಾಸವರ್ಯನ ಶೇಷಾವೇಶಧಾರನ 5
***
ಸಮೀಚೀನ ರಕ್ತಿ=ಯೋಗ್ಯವಾದ ಅಪೇಕ್ಷೆ;
ಯಶೋಧರ=ಯಶೋವಂತ;
ಭಾಸ್ವದಾರ್ಯ=ಕಾಂತಿಯುಕ್ತವಾದ;
ಪ್ರತೀಪಜಾತ=ಬಾಹ್ಲೀಕ ರಾಜ;
***