ರಾಗ ಕೇದಾರಗೌಳ ಅಟತಾಳ
ನಿನ್ನ ನಾಮವೆ ಎನಗೆ ಅಮೃತಾನ್ನವು
ಇನ್ನು ಹಸಿದಿರಲೇಕೆ ಎನಗೆ ನೀನೊಲಿದಿರಲು ||ಪ||
ಓಂಕಾರವೆಂಬ ನಿನ್ನ ನಾಮ ಉಪ್ಪಿನಕಾಯಿ
ಶಂಖಪಾಣಿಯ ನಾಮ ಶಾಕಾದಿ ಸೂಪ
ಸಂಕರುಷಣ ಎಂಬ ನಾಮ ದಿವ್ಯ ಶಾಲ್ಯನ್ನವು
ಪಂಕಜಾಕ್ಷ ನಿನ್ನ ನಾಮ ಪಳದ್ಯ ಸಾರು ||
ಕೇಶವನೆಂಬ ನಾಮ ಕರಿದ ಹೂರಣ ಕಡುಬು
ವಾಸುದೇವನ ನಾಮ ವಡೆ ಶ್ಯಾವಿಗೆ
ಸಾಸಿರವೆಂಬ ನಾಮ ಶಾವಿಗೆ ಪರಮಾನ್ನ
ದೋಷದೂರನ ನಾಮ ಸೂಸಲ ಕಡುಬು ||
ನಾರಾಯಣ ನಿನ್ನ ನಾಮ ನೊರೆ ಹಾಲು ಸಕ್ಕರೆ
ಶ್ರೀರಾಮನಾಮ ಸರವಳಿಗೆ ಸಜ್ಜಿಗೆ
ಕಾರುಣ್ಯನಿಧಿ ನಾಮ ಕರಿದ ಹಪ್ಪಳ ಸಂಡಿಗೆ
ಪಾರಾಯಣ ನಾಮ ಪರಿಪರಿಯ ಪರಮಾನ್ನ ||
ಯದುಪತಿಯೆಂಬ ನಾಮ ಎಣ್ಹೋಳಿಗೆ
ರಾಶಿ ಮಧುಸೂದನನೆಂಬ ನಾಮ ಮಂಡಿಗೆಯು
ಚತುರ ಗೋವಳ ನಾಮ ಚೆಲುವ ಬಿಸೂರಿಗೆ
ಪದುಮನಾಭ ನಿನ್ನ ನಾಮ ಪರಿ ಪರಿಯ ಭಕ್ಷ್ಯ ||
ದೇವಕೀಸುತ ನಾಮ ದಧ್ಯನ್ನದ ಮುದ್ದೆ
ಗೋವಿಂದನ ನಾಮ ಗುಳ್ಳೋರಿಗೆ
ಮಾವಮರ್ದನ ನಾಮ ಕಲಸುಮೇಲೋಗರ
ರಾವಣಾರಿಯ ನಾಮ ದೋಸೆ ಸುಕ್ಕಿನುಂಡೆ ||
ಗರುಡವಾಹನ ನಾಮ ಘೃತ ಪಯೋದಧಿ ತಕ್ರ
ಪರಮಪುರುಷನ ನಾಮ ಪನ್ನೀರು ಪಾನ
ಕರಿವರದ ನಿನ್ನ ನಾಮ ಕರ್ಪೂರದ ವೀಳ್ಯ
ಶರಧಿಶಯನ ನಾಮ ಶಯನಪರ್ಯಂಕ ||
ಈ ಪರಿಲಿ ನಾಮಾವಳಿಯನು ನೆರೆ ಸವಿದುಂಬೆ
ಆಪತ್ತು ಬಿಡಿಸೆನ್ನ ಕ್ಷುಧೆಯ ನೂಕಿ
ಗೋಪಾಲ ಉರಗಾದ್ರಿ ಪುರಂದರ ವಿಠಲನೆ
ಶ್ರೀಪಾದ ನಂಬಿ ಅಪವರ್ಗವ ಸೇರುವೆ ||
***
ನಿನ್ನ ನಾಮವೆ ಎನಗೆ ಅಮೃತಾನ್ನವು
ಇನ್ನು ಹಸಿದಿರಲೇಕೆ ಎನಗೆ ನೀನೊಲಿದಿರಲು ||ಪ||
ಓಂಕಾರವೆಂಬ ನಿನ್ನ ನಾಮ ಉಪ್ಪಿನಕಾಯಿ
ಶಂಖಪಾಣಿಯ ನಾಮ ಶಾಕಾದಿ ಸೂಪ
ಸಂಕರುಷಣ ಎಂಬ ನಾಮ ದಿವ್ಯ ಶಾಲ್ಯನ್ನವು
ಪಂಕಜಾಕ್ಷ ನಿನ್ನ ನಾಮ ಪಳದ್ಯ ಸಾರು ||
ಕೇಶವನೆಂಬ ನಾಮ ಕರಿದ ಹೂರಣ ಕಡುಬು
ವಾಸುದೇವನ ನಾಮ ವಡೆ ಶ್ಯಾವಿಗೆ
ಸಾಸಿರವೆಂಬ ನಾಮ ಶಾವಿಗೆ ಪರಮಾನ್ನ
ದೋಷದೂರನ ನಾಮ ಸೂಸಲ ಕಡುಬು ||
ನಾರಾಯಣ ನಿನ್ನ ನಾಮ ನೊರೆ ಹಾಲು ಸಕ್ಕರೆ
ಶ್ರೀರಾಮನಾಮ ಸರವಳಿಗೆ ಸಜ್ಜಿಗೆ
ಕಾರುಣ್ಯನಿಧಿ ನಾಮ ಕರಿದ ಹಪ್ಪಳ ಸಂಡಿಗೆ
ಪಾರಾಯಣ ನಾಮ ಪರಿಪರಿಯ ಪರಮಾನ್ನ ||
ಯದುಪತಿಯೆಂಬ ನಾಮ ಎಣ್ಹೋಳಿಗೆ
ರಾಶಿ ಮಧುಸೂದನನೆಂಬ ನಾಮ ಮಂಡಿಗೆಯು
ಚತುರ ಗೋವಳ ನಾಮ ಚೆಲುವ ಬಿಸೂರಿಗೆ
ಪದುಮನಾಭ ನಿನ್ನ ನಾಮ ಪರಿ ಪರಿಯ ಭಕ್ಷ್ಯ ||
ದೇವಕೀಸುತ ನಾಮ ದಧ್ಯನ್ನದ ಮುದ್ದೆ
ಗೋವಿಂದನ ನಾಮ ಗುಳ್ಳೋರಿಗೆ
ಮಾವಮರ್ದನ ನಾಮ ಕಲಸುಮೇಲೋಗರ
ರಾವಣಾರಿಯ ನಾಮ ದೋಸೆ ಸುಕ್ಕಿನುಂಡೆ ||
ಗರುಡವಾಹನ ನಾಮ ಘೃತ ಪಯೋದಧಿ ತಕ್ರ
ಪರಮಪುರುಷನ ನಾಮ ಪನ್ನೀರು ಪಾನ
ಕರಿವರದ ನಿನ್ನ ನಾಮ ಕರ್ಪೂರದ ವೀಳ್ಯ
ಶರಧಿಶಯನ ನಾಮ ಶಯನಪರ್ಯಂಕ ||
ಈ ಪರಿಲಿ ನಾಮಾವಳಿಯನು ನೆರೆ ಸವಿದುಂಬೆ
ಆಪತ್ತು ಬಿಡಿಸೆನ್ನ ಕ್ಷುಧೆಯ ನೂಕಿ
ಗೋಪಾಲ ಉರಗಾದ್ರಿ ಪುರಂದರ ವಿಠಲನೆ
ಶ್ರೀಪಾದ ನಂಬಿ ಅಪವರ್ಗವ ಸೇರುವೆ ||
***
pallavi
ninna nAmave enage amrtAnnavu innu hasidiralEka enage nInolidiralu
caraNam 1
OmkAravemba ninna nAma uppinakAyi sanga pANiya nAma shAkAdi shubha
sankarSaNa emba nAma divya shAlyannavu pankajAkSa ninna nAma paLadya sAru
caraNam 2
kEshavanemba nAma karida huraNa kaDubu vAsudEvana nAma vaDe shyAvige
sAsiravemba nAma shAvige paramAnna dOSadUrana nAma susala kaDubu
caraNam 3
nArAyaNa ninna nAma nore hAlu sallare shrIrAma nAma saravaLige sajjige
kAruNya nidhi nAma karida happaLa saNDige pArAyaNa nAma pari pariya paramAnna
caraNam 4
yadupatiyemba nAma eNhOLige rAshi madhusUdananemba nAma maNDigeyu
catura gOvaLa nAma celuva bIsurige padumanAbha ninna nAma pari pariya pakSya
caraNam 5
dEvakIsuta nAma dadhyannada mudde gOvindana nAma guLLoroge
mAvamardana nAma kalasu mElOgara rAvaNAriya nAma dOse sukhinuNDe
caraNam 6
garuDa vAhana nAma ghrta payO dadhi takra parama puruSana nAma pannItu pAna
karivarada ninna nAma karpUrada vILya sharadi shayana nAma shayana paryanka
caraNam 7
I pariya nAmAvaLiyanu nere savidumbe Apattu biDisenna kSudheya nUki
gOpAla uragAdri purandara viTTalane shrIpAda nambi apavargava sEruve
***