Friday, 6 December 2019

ನಿನ್ನ ನಾಮವೆ ಎನಗೆ ಅಮೃತಾನ್ನವು purandara vittala

ರಾಗ - : ತಾಳ -

ನಿನ್ನ ನಾಮವೆ ಎನಗೆ ಅಮೃತಾನ್ನವು l
ಇನ್ನು ಹಸಿದಿರಲೇಕೆ ಎನಗೆ ನೀನೊಲಿದಿರಲು ll ಪ ll 

ಓಂಕಾರವೆಂಬ ನಾಮ ಉಪ್ಪು ಉಪ್ಪಿನಕಾಯಿ
ಶಂಖಪಾಣಿಯ ನಾಮ ಪಾಕಾದಿ ಸೂಪ ll
ಸಂಕರ್ಷಣನ ನಾಮ ದಿವ್ಯ ಶಾಲ್ಯನ್ನವು
ಪಂಕಜಾಕ್ಷನ ನಾಮ ಪಳಿದೆ ಬಗೆಬಗೆ ಸಾರು ll ೧ ll

ಕೇಶವನೆಂಬ ನಾಮ ಕರಿದ ಹೂರಣಗಡುಬು l
ವಾಸುದೇವನ ನಾಮ ವಡೆ ಸೇವೆಗೆ
ಸಾಸಿರದ ನಾಮಗಳು ಸವಿಸವಿಯ ಪರಮಾನ್ನ l
ದೋಷದೂರನ ನಾಮ ದೋಸೆ ಸೂಸಲಗಡಬು ll ೨ ll

ನಾರಾಯಣನ ನಾಮ ನೊರೆಹಾಲು ಸಕ್ಕರೆ l
ಶ್ರೀರಾಮ ನಾಮ ಸರವಳಿ ಸಜ್ಜಿಗೆ ll
ಕಾರುಣ್ಯನಿಧಿ ನಾಮ ಕರಿದ ಹಪ್ಪಳ ಸಂಡಿಗೆ l
ಪಾರಾಯಣನ ನಾಮ ಪರಿಪರಿಯ ಪಕ್ವಾನ್ನ ll ೩ ll

ಯದುಪತಿಯೆಂಬ ನಾಮ ಎಣ್ಣೂರಿಗೆಯ ರಾಶಿ l
ಮಧುಸೂದನನ ನಾಮ ಮಧುರ ಮಂಡಿಗೆಯು ll
ಚದುರಗೋವಳ ನಾಮ ಚೆಲುವ ಬೀಸೂರಿಗೆ l
ಪದಮನಾಭನ ನಾಮ ಪರಿಪರಿಯ ಭಕ್ಷ್ಯ ll ೪ ll

ದೇವಕೀಸುತನ ನಾಮ ದಧ್ಯನ್ನದಾ ಮುದ್ದೆ l
ಗೋವಿಂದನ ನಾಮ ಗುಳ್ಳೋರಿಗೆ ll
ಮಾವಮರ್ದನನ ನಾಮ ಕಲಸುಮೇಲೋಗರ l
ರಾವಣಾರಿಯ ನಾಮ ಇಡ್ಡಲಿಗೆ ಸುಖಿಯುಂಡೆ ll ೫ ll

ಗರುಡವಾಹನನ ನಾಮ ಘೃತಪಯೋದಧಿತಕ್ರ l
ಪರಮಪುರುಷನ ನಾಮ ಪನ್ನೀರ ಪಾನ ll
ಕರಿವರದ ನಿನ್ನ ನಾಮ ಕರ್ಪುರದ ವೀಳ್ಯವು l
ಶರಧಿಶಯನನ ನಾಮ ಶಯನಪರ್ಯಂಕ ll ೬ ll

ಈ ಪರಿಯ ನಾಮಾವಳಿಯನು ಸವಿದುಂಡು l
ಆಪತ್ತು ಬಿಡಿಸೆನ್ನ ಕ್ಷುಧೆಯ ನೂಕಿ ll
ಗೋಪಾಲ ಉರಗಾದ್ರಿ ಪುರಂದರವಿಟ್ಠಲನ l
ಶ್ರೀಪಾದವನೆ ನಂಬಿ ಅಪವರ್ಗ ಸೇರುವ ll ೭ ll
***

ರಾಗ ಕೇದಾರಗೌಳ ಅಟತಾಳ 

ನಿನ್ನ ನಾಮವೆ ಎನಗೆ ಅಮೃತಾನ್ನವು
ಇನ್ನು ಹಸಿದಿರಲೇಕೆ ಎನಗೆ ನೀನೊಲಿದಿರಲು ||ಪ||

ಓಂಕಾರವೆಂಬ ನಿನ್ನ ನಾಮ ಉಪ್ಪಿನಕಾಯಿ
ಶಂಖಪಾಣಿಯ ನಾಮ ಶಾಕಾದಿ ಸೂಪ
ಸಂಕರುಷಣ ಎಂಬ ನಾಮ ದಿವ್ಯ ಶಾಲ್ಯನ್ನವು
ಪಂಕಜಾಕ್ಷ ನಿನ್ನ ನಾಮ ಪಳದ್ಯ ಸಾರು ||

ಕೇಶವನೆಂಬ ನಾಮ ಕರಿದ ಹೂರಣ ಕಡುಬು
ವಾಸುದೇವನ ನಾಮ ವಡೆ ಶ್ಯಾವಿಗೆ
ಸಾಸಿರವೆಂಬ ನಾಮ ಶಾವಿಗೆ ಪರಮಾನ್ನ
ದೋಷದೂರನ ನಾಮ ಸೂಸಲ ಕಡುಬು ||

ನಾರಾಯಣ ನಿನ್ನ ನಾಮ ನೊರೆ ಹಾಲು ಸಕ್ಕರೆ
ಶ್ರೀರಾಮನಾಮ ಸರವಳಿಗೆ ಸಜ್ಜಿಗೆ
ಕಾರುಣ್ಯನಿಧಿ ನಾಮ ಕರಿದ ಹಪ್ಪಳ ಸಂಡಿಗೆ
ಪಾರಾಯಣ ನಾಮ ಪರಿಪರಿಯ ಪರಮಾನ್ನ ||

ಯದುಪತಿಯೆಂಬ ನಾಮ ಎಣ್ಹೋಳಿಗೆ
ರಾಶಿ ಮಧುಸೂದನನೆಂಬ ನಾಮ ಮಂಡಿಗೆಯು
ಚತುರ ಗೋವಳ ನಾಮ ಚೆಲುವ ಬಿಸೂರಿಗೆ
ಪದುಮನಾಭ ನಿನ್ನ ನಾಮ ಪರಿ ಪರಿಯ ಭಕ್ಷ್ಯ ||

ದೇವಕೀಸುತ ನಾಮ ದಧ್ಯನ್ನದ ಮುದ್ದೆ
ಗೋವಿಂದನ ನಾಮ ಗುಳ್ಳೋರಿಗೆ
ಮಾವಮರ್ದನ ನಾಮ ಕಲಸುಮೇಲೋಗರ
ರಾವಣಾರಿಯ ನಾಮ ದೋಸೆ ಸುಕ್ಕಿನುಂಡೆ ||

ಗರುಡವಾಹನ ನಾಮ ಘೃತ ಪಯೋದಧಿ ತಕ್ರ
ಪರಮಪುರುಷನ ನಾಮ ಪನ್ನೀರು ಪಾನ
ಕರಿವರದ ನಿನ್ನ ನಾಮ ಕರ್ಪೂರದ ವೀಳ್ಯ
ಶರಧಿಶಯನ ನಾಮ ಶಯನಪರ್ಯಂಕ ||

ಈ ಪರಿಲಿ ನಾಮಾವಳಿಯನು ನೆರೆ ಸವಿದುಂಬೆ
ಆಪತ್ತು ಬಿಡಿಸೆನ್ನ ಕ್ಷುಧೆಯ ನೂಕಿ
ಗೋಪಾಲ ಉರಗಾದ್ರಿ ಪುರಂದರ ವಿಠಲನೆ
ಶ್ರೀಪಾದ ನಂಬಿ ಅಪವರ್ಗವ ಸೇರುವೆ ||
***

pallavi

ninna nAmave enage amrtAnnavu innu hasidiralEka enage nInolidiralu

caraNam 1

OmkAravemba ninna nAma uppinakAyi sanga pANiya nAma shAkAdi shubha
sankarSaNa emba nAma divya shAlyannavu pankajAkSa ninna nAma paLadya sAru

caraNam 2

kEshavanemba nAma karida huraNa kaDubu vAsudEvana nAma vaDe shyAvige
sAsiravemba nAma shAvige paramAnna dOSadUrana nAma susala kaDubu

caraNam 3

nArAyaNa ninna nAma nore hAlu sallare shrIrAma nAma saravaLige sajjige
kAruNya nidhi nAma karida happaLa saNDige pArAyaNa nAma pari pariya paramAnna

caraNam 4

yadupatiyemba nAma eNhOLige rAshi madhusUdananemba nAma maNDigeyu
catura gOvaLa nAma celuva bIsurige padumanAbha ninna nAma pari pariya pakSya

caraNam 5

dEvakIsuta nAma dadhyannada mudde gOvindana nAma guLLoroge
mAvamardana nAma kalasu mElOgara rAvaNAriya nAma dOse sukhinuNDe

caraNam 6

garuDa vAhana nAma ghrta payO dadhi takra parama puruSana nAma pannItu pAna
karivarada ninna nAma karpUrada vILya sharadi shayana nAma shayana paryanka

caraNam 7

I pariya nAmAvaLiyanu nere savidumbe Apattu biDisenna kSudheya nUki
gOpAla uragAdri purandara viTTalane shrIpAda nambi apavargava sEruve
***

No comments:

Post a Comment