Showing posts with label ನೀರ ತರಂಗಿಣಿ ತೀರ ನಾರಸಿಂಹ jagannatha vittala NEERA TARANGINI TEERA NARASIMHA. Show all posts
Showing posts with label ನೀರ ತರಂಗಿಣಿ ತೀರ ನಾರಸಿಂಹ jagannatha vittala NEERA TARANGINI TEERA NARASIMHA. Show all posts

Sunday, 29 December 2019

ನೀರ ತರಂಗಿಣಿ ತೀರ ನಾರಸಿಂಹ ankita jagannatha vittala NEERA TARANGINI TEERA NARASIMHA




 ರಾಗ ಕಲ್ಯಾಣಿ   ಆದಿತಾಳ 
2nd Audio by Mrs. Nandini Sripad

ಶ್ರೀ ಜಗನ್ನಾಥದಾಸರ ಕೃತಿ 


ನೀರ ತರಂಗಿಣಿ ತೀರ ನಾರಸಿಂಹ ॥ ಪ ॥
ಸಾರಿದೆನೊ ತವಪಾದ ಪಂಕಜ ।
ತೋರು ಮನದಲಿ ತವಕದಿ ॥ ಅ ಪ ॥

ನಾರದನುತ ಚಿಚ್ಛರೀರಗ ಶ್ರೀ ಭೂ ದು - ।
ರ್ಗಾರಮಣ ದುರಿತಾರಿ ಬ್ರಹ್ಮ ಸ - ।
ಮೀರ ಮುಖ್ಯ ವಿಬುಧಾರ್ಚಿತ ।
ಚಾರು ಚರಣಯುಗ ಕ್ಷೀರಾಬ್ಧಿಶಯನ ಮ - ॥
ದ್ಭಾರ ನಿನ್ನದು ಮೂರುಲೋಕದ । ಸೂರಿಗಮ್ಯ ಸುಖಾತ್ಮಕ ॥ 1 ॥

ವೇದವೇದ್ಯ ಸಂಸಾರೋದಧಿ ತಾರಕ ।
ಛೇದ ಭೇದ ವಿಷಾದವೇ ಮೊದ - ।
ಲಾದ ದೋಷವರ್ಜಿತ ।
ಶ್ರೀದ ಶ್ರೀಶ ಅನಂತ ಆತ್ಮಕಾಮ ॥
ಬಾದರಾಯಣ ಭಕ್ತವರ ಪ್ರ।ಹ್ಲಾದಪೋಷಕ ಪಾಹಿಮಾಂ ॥ 2 ॥

ಹೋತಹೃದ್ಯ ಜಗನ್ನಾಥವಿಠಲ ನಿನ್ನ ।
ಮಾತು ಮಾತಿಗೆ ಸ್ಮರಿಸುತಿಹ ಸ - ।
ಚ್ಚೇತನರನು ನೀ ಸರ್ವದಾ ।
ವೀತಶೋಕ ಭವಭೀತಿ ಬಿಡಿಸಿ ತವ ॥
ದೂತರೊಳಗಿಡು ಮಾತರಿಶ್ವಗ । ಭೂತಭಾವನ ಭವ್ಯದ ॥ 3 ॥
**********


ರಾಗ ಕಲ್ಯಾಣಿ ತಾಳ ಅಟ್ಟ

ನೀರ ತರಂಗಿಣಿ ತೀರ ನಾರಸಿಂಹ ಪ


ಸಾರಿದೆನೊ ತವಪಾದ ಪಂಕಜ

ತೋರು ಮನದಲಿ ತವಕದಿ ಅ

ನಾರದನುತ ಚಿಚ್ಛರೀರವ ಶ್ರೀ ಭೂದು

ರ್ಗಾರಮಣ ದುರಿತಾರಿ ಬ್ರಹ್ಮ ಸ
ಮೀರ ಮುಖ ವಿಬುಧಾರ್ಚಿತ
ಚಾರು ಚರಣಯುಗ ಕ್ಷೀರಾಬ್ಧಿ ಶಯನ ಮ
ದ್ಭಾರ ನಿನ್ನದು ಮೂರು ಲೋಕದ
ಸೂರಿಗಮ್ಯ ಸುಖಾತ್ಮಕ 1

ವೇದವೇದ್ಯ ಸಂಸಾರೋದಧಿ ತಾರಕ

ಛೇದ ಭೇದ ವಿಷಾದವೇ ಮೊದ
ಶ್ರೀದ ಶ್ರೀಶ ಅನಂತ ಆಪ್ತಕಾಮ
ಬಾದರಾಯಣ ಭಕ್ತವರ ಪ್ರ
ಹ್ಲಾದಪೋಷಕ ಪಾಹಿ ಮಾಂ 2

ಹೋತಹೃದ್ಯ ಜಗನ್ನಾಥವಿಠಲ ನಿನ್ನ

ಮಾತು ಮಾತಿಗೆ ಸ್ಮರಿಸುತಿಹ ಸ
ಚ್ಚೇತನರನು ನೀ ಸರ್ವದಾ
ವೀತಶೋಕ ಭವಭೀತಿ ಬಿಡಿಸಿ ತವ
ದೂತರೊಳಗಿಡು ಮಾತರಿಶ್ವಗ ಭೂತಭಾವನ ಭವ್ಯದ3
********