ಕಾಖಂಡಕಿ ಶ್ರೀ ಕೃಷ್ಣದಾಸರು
ದೋರನು ಬ್ರಹ್ಮಾದಿಕರಿಗೆ ಪ
ದುಷ್ಟತನವ ಮಾಡಲು ಮನಿಮನಿ ಪೊಕ್ಕು| ಸಿಟ್ಟಿಲೆ ಕಣ್ಣಿಲೆ ಚರಣವನು| ಕಟ್ಟಲು ಒರಳನೆಳೆದುಕೊಂಡು ಹೋಗಿ| ನೆಟ್ಟನೆರಡಮರಕೆಡಹಿದ ಕೃಷ್ಣಾ 1
ಮಣ್ಣವನುಂಗಲು ಮುಳಿಯಲು ಗೋಪಿ| ಚಿಣ್ಣರ ಕೇಳೆ ನಾನಿಲ್ಲೆನುತ| ಸಣ್ಣ ಚೆಲುವಾ ಬಾಯಾ ನೋಡೆಂದು ತೆರೆದು ತಾ| ಉನ್ನಂತ ಬ್ರಹ್ಮಾಂಡ ದೋರಿದಾ ಕೃಷ್ಣಾ2
ನೋಡು ಬಾಲಕ ರೂಪ ತಾನಾಗಿಹಾ| ಪ್ರೌಢತನದಿ ಕೊಳಲನೂದಿ| ರೂಢಿಲಿ ಗೋಪಿಕ ಮನಸೆಳೆದು ನಲಿ| ದಾಡುವ ಮಹಿಪತಿ ಸುತಪ್ರಿಯ ಕೃಷ್ಣಾ3
***