ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿರೈ ಜನಾ ರಂಜನೆಯಲ್ಲಿ | ನೋಡಿರೈ ಜನಾ | ಮಾಡದೆ ಹಿರಿಗುರು ಭಕ್ತಿಯ ಶೀಲದಿ | ರೂಢಿಯ ಡಂಭಕ ಹರಿದಾಡುವದು ಪ
ಸಾಧು ಸಂತರ ಮನೆಯಲ್ಲಿ | ಆದರವಿಲ್ಲಾ ಮನದಲ್ಲಿ | ಮೇದಿನಿಯಲಿ ನುಡಿಸಿದ್ಧಿಯ ಹೇಳಲು | ಸಾಧಿಸಿ ಹೋಗುತ ಬಾಗುತಲಿಹುದು 1
ಚಂದನವಿಡಿದು ತೆಯ್ವಲ್ಲಿ | ಒಂದು ಬಾರದು ನೊಣವಲ್ಲಿ | ಕುಂದದೆ ಎಂಜಲ ತೊಳೆವಾಸ್ಥಳದಲ್ಲಿ | ಸಂದಿಸಿ ಮುಕುರುವ ಸಂದಲಿ ಯಂದದಿ 2
ಪರಗತಿ ಸಾಧನ ವರಿಯರು | ಬರಿದೆ ಭ್ರಾಂತಿಗೆ ಬೆರೆವರು | ಗುರುಮಹಿಪತಿಸುತ ಪ್ರಭು ಕಲ್ಪತರು | ಸೇರದೆ ಬೊಬ್ಬುಲಿ ಮರಕೆಳಗಾಡುವ 3
*****