..
ವರಪುಣ್ಯಬೇಡುವೆನಾಂ
ಗುರುವರ್ಯನ ಚರಣ ಪಿಡಿದು ಮುಕ್ತಿಯಪಥದೊಳ್
ಪರಿಕಿಸಿ ಶೀಘ್ರದಿಘನತರ
ಪರತತ್ವಪಡೆದು ಮರಣ ಜನನವ ತೊರೆವೇಂ ಕಂದ
ಸನ್ನುತಗುರುವರತತ್ವ ಬೋಧಿಸಿ-
ಮಂಗಳಾಶಾಸನಗೈಯುತಲೀ ಪ
ಎನ್ನನೆ ಯಜಿಸುತ ಸುಮ್ಮನೆಯಿದ್ದರೆ-
ಬೇಡಿದವರಗಳ ಕೊಡುವೆನುತ ಅ.ಪ
ಕೊಟ್ಟರು ದ್ರವ್ಯವ ನಿನ್ನಪರಾಧವ
ಕೊಡದಿದ್ದರು ನಾ ಮನ್ನಿಸುವೆ
ನಿಷ್ಠೆಯೊಳ್ಪರಮನ ಸನಿಯದೊಳಿದ್ದರೆ
ಬಿಟ್ಟೆನೆಯೆಂದಿಗು ನಂಬೆನುತ 1
ಸಾಧಿಸಿ ವಿರತಿಯ ಸಂಶಯಗೈಯದೆ-
ಭೇದವ ಛೇದಿಸಿ ನಿರ್ಮಲದಿ
ನಾದವ ಕೇಳುತ ಚಿತ್ಕಳೆ ನೋಡುತ
ಮೋದದಿ ಶ್ರೀಹರಿ ನೀನೆನುತ 2
ತಿರುಪಣ್ಣಾಳ್ವಾರ್ವಿಪ್ರರು ಕಲ್ಲಿನೊಳ್ಬೀರಲು
ಮೌನವ ಧರಿಸಿರಲು
ಕರೆದು ಲೋಕಸಾರಂಗಮುನಿಗಳಂ-
ಕಳುಹಿಸಿಕರುಣದಿ ಪೊರೆದಂತ 3
ವೇಶ್ಯೆಯ ವಚನಕೆ ಮೆಚ್ಚುತ ವರಗಳ
ಬೇಡಿಕೊ ಎನ್ನಲು ನಿನ್ನಂತ
ಕೂಸನು ಕೋರಿದ ಮಾತ್ರಕೆ ಆಕೆಯ
ಕುಕ್ಷಿಯೊಳ್ಪುಟ್ಟಿದೆ ಮನ್ನಿಸುತ 4
ಭ್ರಷ್ಟನು ದ್ರೌಪದಿ ಸೆರಗನು ಪಿಡಿಯಲು
ಅಂತರಂಗದಿಂ ಧ್ಯಾನಿಸಲು
ಸೃಷ್ಟಿಯ ಭಾರವ ಹರಿಸಿದ ಧೀರನೆ
ಇಷ್ಟದಿ ಸೀರೆಯ ಕೊಟ್ಟಂತ 5
ಸತ್ಯವಾಗಿ ತಾ ಭಕ್ತರ ಹೃದಯದಿ
ನಿತ್ಯವು ಕೃಪೆಯನು ತೋರುತಲಿ
ಪೃಥ್ವಿಲಿ ಈ ಮಹದೇವನ ಪುರದೊಳು
ಅರ್ಥಿಲಿ ರಂಗನ ಪಿಡಿದಂತ 6
****