Showing posts with label ಪಂಡರಿಯ ಪುರನಾಥ ಭಕುತರ ದಾತಾ gurugovinda vittala PANDARIYA PURANAATHA BHAKUTARA DAATA. Show all posts
Showing posts with label ಪಂಡರಿಯ ಪುರನಾಥ ಭಕುತರ ದಾತಾ gurugovinda vittala PANDARIYA PURANAATHA BHAKUTARA DAATA. Show all posts

Monday, 12 April 2021

ಪಂಡರಿಯ ಪುರನಾಥ ಭಕುತರ ದಾತಾ ankita gurugovinda vittala PANDARIYA PURANAATHA BHAKUTARA DAATA




ಪಂಡರಿಯ ಪುರನಾಥ l ಭಕುತರ ದಾತಾ l

ಅಂಡಲೆದು ಜನುಮಗಳ l ಬೆಂಡಾದೆ ಹರಿಯೇ ll ಪ ll


ಶ್ವಾನ ಸೂಕರ ಖರದ l ಹೇನು ಹಕ್ಕಿಯ ಮೃಗದ l

ಯೋನಿ ಯೋನಿಯ ಚರಿಸಿ l ಬೇನೆಗ್ವೊಳಗಾದೇ

ಮಾನನಿಧಿ ಕಾರುಣ್ಯ l ವೇನ ಬಣ್ಣಿಪೆನಯ್ಯ 

ಮಾನವನ ಮಾಡೆನ್ನ l ನೀನಾಗಿ ಪೊರೆದೇ ll 1 ll

ಕರ್ಮ ಕೋಟಿಗಳಲ್ಲಿ l ಮರ್ಮಗಳ ಮರೆತಲ್ಲಿ

ಒಮ್ಮನದಿ ಸೂತ್ರಗಳ ತದ್ಭಾಷ್ಯಂಗಳಾ ll

ಪೇರ್ಮೆಯಲಿ ನೋಡದಲೆ l ಕರ್ಮಚರಿಸಿದೆನಲ್ಲೆ

ಭರ್ಮ ಗರ್ಭನನಯ್ಯ l ನಿರ್ಮಮನ ಮಾಡಯ್ಯ ll 2 ll


ಸಕಲ ಶಾಸ್ತ್ರಾರ್ಥಗಳ l ಸಕಲ ಸಾರನೆ ಅಖಿಳ

ಭಕುತ ಜನ ಸಂಸೇವ್ಯ l ಮಧ್ವಮುನಿ ವಂದ್ಯ ll

ಸಕಲಾತ್ಮಕನೆ ಗುರು l ಗೋವಿಂದವಿಟ್ಠಲಯ್ಯ 

ಸಕಲಕೂ ನೀನೇ ಚೇ l ಷ್ಟಕನೆಂದು ತಿಳಿಸೊ ll 3 ll

***