Showing posts with label ಬ್ಯಾಡಿರವ್ವ ಎನ್ನ ಕಂದನ್ನ ದೂರಬ್ಯಾಡಿರೆ prasannavenkata BYAADIRAVVA ENNA KANDANNA DOORABYAADIRE. Show all posts
Showing posts with label ಬ್ಯಾಡಿರವ್ವ ಎನ್ನ ಕಂದನ್ನ ದೂರಬ್ಯಾಡಿರೆ prasannavenkata BYAADIRAVVA ENNA KANDANNA DOORABYAADIRE. Show all posts

Tuesday, 5 October 2021

ಬ್ಯಾಡಿರವ್ವ ಎನ್ನ ಕಂದನ್ನ ದೂರಬ್ಯಾಡಿರೆ ankita prasannavenkata BYAADIRAVVA ENNA KANDANNA DOORABYAADIRE



by ಪ್ರಸನ್ನವೆಂಕಟದಾಸರು
ಬ್ಯಾಡಿರವ್ವ ಎನ್ನ ಕಂದನ್ನ ದೂರಬ್ಯಾಡಿರೆ
ಗಾರುಮಾಡಿ ಚೋರನೆಂದು ಸಾರಿಪಿಡಿದು ತಂದು ದುರುಳನೆನ್ನ ಬ್ಯಾಡಿರೆ ಪ.

ಹಸಿದೆ ಮಗುವೆ ಹಸಿದೆ ಚಿನ್ನಶಿಶುವೆ ಪಾಲ್ಗುಡಿಯ ಬಾರೆನ್ನೆಮಿಸುನಿಬಟ್ಟಲೊಳಿಟ್ಟ ಪಾಲಿನಬಿಸಿಗೆ ಬೊವ್ವೆಂದು ಬೆದರುವಮೊಸರ ಹರವಿಯೊಡೆದು ನಿಮ್ಮನೆಪೊಸಬೆಣ್ಣೆಗಳ ಮೆಲುವನೆಂದುಅಸಿಯರೊಂದುಗೂಡೆನ್ನ ಕೂಸಿಗೆಪುಸಿಯ ವಾಕನುಸುರಿ ದೂರ ಬ್ಯಾಡಿರೆ 1

ಮುದ್ದು ತಾರೊ ರಂಗ ಎನಲುಎದ್ದು ತಪ್ಪಡಿಗಳನಿಡುತಬಿದ್ದು ಅಂಬೆಗಾಲನಿಕ್ಕಿಮುದ್ದು ನೀಡಲರಿಯನೆಕದ್ದು ನಿಮ್ಮನೆ ಕೆನೆವಾಲನುಗೆದ್ದು ನಿಮ್ಮ ಬಾಲರ ಬೆನ್ನಗುದ್ದಿ ಓಡಿ ಬರುವನೆಂತೆಬುದ್ಧಿ ಇಲ್ಲವೆ ನಿಮಗೆ ದೂರ ಬ್ಯಾಡಿರೆ 2

ಎತ್ತಿಕೊಂಡು ರಂಬಿಸಿ ಬಾಯೊಳುತುತ್ತನಿಡಲು ಉಣ್ಣಲರಿಯಕತ್ತಲೆಯೊಳು ಹೆಂಗಳ ಪಿಡಿದುಚಿತ್ತ ಮೋಹಿಸಬಲ್ಲನೆಹೆತ್ತ ಮಕ್ಕಳಿಲ್ಲವೆ ನಿಮಗೆವ್ಯರ್ಥ ಜಾರನೆನ್ನುವಿರಮ್ಮಕರ್ತಪ್ರಸನ್ವೆಂಕಟರಾಯಗೆಭಕ್ತವತ್ಸಲನಲ್ಲೆಂದು ದೂರ ಬ್ಯಾಡಿರೆ 3
****