ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಸುದಿವಸ ನೋಡಿ ಕಂಡೆವು ಕಣ್ಣಾರೆ ಚಂದವಾಗಿ ಗುರು ಪೂರ್ಣಮಾಡಿದ ಮನೋಹರ P
ಕೇಳದಾ ಕೇಳಿದೆವು ಫೇಳಿಸುವದೆನ್ನೊಳಗೆ ಹೇಳೇನೆಂದರೆ ಬಾರದು ಸುಳವು ಇನ್ನೊಬ್ಬರಿಗೆ ತಾಳಮೃದಂಗ ಭೇರಿ ಭೋರಿಡುತ ಒಳ ಹೊರಗೆ ತಿಳಿದೇನಂದರದೇ ನೋಡಿ ಉಲುವು ತಾ ತನ್ನೊಳಗೆ 1
ಕಾಣದ ಕಂಡೆವು ಖೂನ ತಾ ಕಣ್ಣಿನ ಕೊನೆಯೊಳಗೆ ಪ್ರಾಣ ಪಾವನ್ನವಾಯಿತು ಪುಣ್ಯ ಪ್ರಭೆಯೊಳಗೆ ಭಾನುಕೋಟಿತೇಜ ಧನ್ಯಗೈಸಿದ ಎನಗೆ ಸ್ವಾನುಭವದ ಸುಖ ಎದುರಿಟ್ಟಿತು ಜಗದೊಳಗೆ 2
ನುಡಿಯು ಕೇಳಿದಂಥ ನುಡಿಗೇಳಿದೆವಿಂದು ಕಡಿಗಾಯಿತು ನೋಡಿ ಹುಟ್ಟಿಬಾಯ ಜನ್ಮಸಂದು ವಿಡಿದು ಗುರುಪಾದ ಜನ್ಮಸಾರ್ಥಕಾಯಿತಿಂದು ಪಡೆದ ಮಹಿಪತಿ ನಿಜಾನಂದ ವಸ್ತುವಂದು 3
***