..
kruti by radhabai
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ
ಎನ್ನಿರೋ ``ಶ್ರೀ ರಾಘವೇಂದ್ರಾಯನ ನಮಃ'' ಎಂಬ ಪ
ನಾಮವ ಸ್ಮರಿಸಿ | ಸುಖಿಯಾಗು ಮನವೇ ಅ.ಪ
ಸಂಸಾರ ಸಾಗರದಿ ಬೆಂದು ಬಳಲಿರುವೇನಯ್ಯ
ಮುಂದೇನು ಗತಿ ಕಾಣೆ ಗಾಡಾಂಧಕಾರದೊಳು
ಮುಳುಗಿ ಬೆಂಡಾದೆನೊ ಕರುಣಿಸೈ ಗುರುರಾಘವೇಂದ್ರಾ1
ತಂದೆ ತಾಯಿಯು ನೀನೆ ಬಂಧು ಬಳಗವು ನೀನೆಂದು
ನಂಬಿದೆನೈ ಪ್ರಭವೆ ಸಂದೇಹವೇಕಿನ್ನು ಕಂದನೆನು
ತೆಂದು ಕಾಯೋ ಗುರುವೇ ಶ್ರೀ ರಾಘವೇಂದ್ರ ಪ್ರಭುವೆ2
ಅಂಧತ್ವ ಮೂಕತ್ವ, ಬಧಿರತ್ವ ಎಕಲಾಂಗಿಗಳ
ಹಿಂದೆ ಪೊರೆದೆ ನೀನೆಂಬ ವಾರ್ತೆಕೇಳಿ ನಿನ್ನ
ನಾ ಮೊರೆ ಹೊಕ್ಕೆ ಎನ್ನನುದ್ಧರಿಸುವುದು
ಘನ್ನಮಹಿಮಾ ಶ್ರೀ ರಾಘವೇಂದ್ರಾ 3
ನಿನ್ನ ಪಾದೊದಕವ ಸೇವಿಸುವ ಸುಜನರಿಗೆ
ಭವರೋಗ ಗಳೆಲ್ಲ ಪರಿಹರಿವುದೊ
ಸ್ಮರಣೆ ಮಾತ್ರದಿ ಸಕಲ ಪಾಪಗಳನೋಡಿಸಿ
ಪುನೀತರನೆ ಮಾಡುವಿಯೊ ಗುರುವೆ 4
ಬಿಡೆನು ಬಿಡೆನು ನಿನ್ನಡಿಗಳಿಗೆ ಸೇವಿಸಲು
ದೃಢ ಭಕುತಿಯನೆ ಕೊಡು ಎನಗೆ ಶ್ರೀ ರಾಘವೇಂದ್ರಾ
ಪ್ರಭವೆ ನಿನ್ಹೊರತು ಪೊರೆವರ ನಾ ಕಾಣೆ
ಅಪಾರ ಮಹಿಮ ಶ್ರೀ ರಾಘವೇಂದ್ರಾ 5
***