Showing posts with label ಭಕ್ತರನ ನಂಬದಿರು ಭವದೂರನೆ ಮುಕ್ತಿಯನು vijaya vittala. Show all posts
Showing posts with label ಭಕ್ತರನ ನಂಬದಿರು ಭವದೂರನೆ ಮುಕ್ತಿಯನು vijaya vittala. Show all posts

Thursday, 17 October 2019

ಭಕ್ತರನ ನಂಬದಿರು ಭವದೂರನೆ ಮುಕ್ತಿಯನು ankita vijaya vittala

ವಿಜಯದಾಸ
ಭಕ್ತರನ ನಂಬದಿರು ಭವದೂರನೆ
ಮುಕ್ತಿಯನು ಬೇಡದಲೆ ನಿನ್ನೆ ಪೂಜಿಸುವರು ಪ

ಪ್ರಸ್ತ ಮಾಡುವ ಸಾಧನಕ್ಕೆ ಪೋಗಿ ನಿಂದು ಬಲು
ಹಸ್ತು ಬಂದವನು ತುತ್ತನ್ನ ಕೇಳೆ
ಸ್ವಸ್ತವಾಗಿ ಕುಳಿತು ಭೋಜನ ಮಾಳ್ಪ ಆ
ಗ್ರಹಸ್ತ ಪೊಟ್ಟಿ ತುಂಬದೆ ಬರಿದೆ ಏಳುವನೆ1

ಹಾದಿಕಾರನು ಬಂದು ವಸ್ತಿ ಮಾಡುವದಕ್ಕೆ
ಆದರದಲಿ ಸ್ವಲ್ಪ ಸ್ಥಳವ ಕೇಳಿ
ಪಾದ ಇಡುವನಿತರೊಳು ಕುಳಿತು ಆಮೇಲೆ ಸಂ
ಪಾದಿಸುವ ತನ್ನ ತಕ್ಕಷ್ಟು ಧರಣಿಯನ್ನು2

ಆವದೊಲ್ಲೆವೆಂದು ಆಡುವರು ನಿತ್ಯದಲಿ
ಕಾವ ಕರುಣಿ ನೀನೆಂದು ತಿಳಿದು
ಸಿರಿ ವಿಜಯವಿಠ್ಠಲ ನಿನ್ನ
ಇಂದು 3
*********