..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ಗಣೇಶ
ಹಿತಮತಿಯ ಪಾಲಿಸೊ ಪ
ಗತಿಯ ಕಲ್ಪಿಸಿ ಸಿರಿಪತಿಯ ಪಾದದಿ ಅ.ಪ
ಗಜವದನನೆ ಎನ್ನ ನಿಜಭಕುತಿಯೊಳ್ನಿನ್ನ
ಭಜನೆ ಮಾಡುವಂಥ ನಿಜವ ಪಾಲಿಸಿ 1
ಕರುಣಾಕರ ತವ ಚರಣಾಶ್ರಿತರಘ
ಹರಣ ಮಾಡಿ ನಿನ್ನ ಸ್ಮರಣೆಯ ಕೊಟ್ಟು 2
ದೀನನಾಗಿ ನಾ ನಿನ್ನ ಸನ್ನಿಧಾನಕೆ ಬಂದೆ
ಜ್ಞಾನವಿತ್ತು ಕಾಯೋ ಈಗ ಪ್ರಾಣನಾಥ ವಿಠಲನಲ್ಲಿ 3
***