Showing posts with label ಮತ್ತವನಲ್ಲೊ ಮುರಾರಿ ನಿನಗೆ prasannavenkata MATTAVANALLO MURAARI NINAGE NAA. Show all posts
Showing posts with label ಮತ್ತವನಲ್ಲೊ ಮುರಾರಿ ನಿನಗೆ prasannavenkata MATTAVANALLO MURAARI NINAGE NAA. Show all posts

Sunday, 5 December 2021

ಮತ್ತವನಲ್ಲೊ ಮುರಾರಿ ನಿನಗೆ ankita prasannavenkata MATTAVANALLO MURAARI NINAGE NAA



by ಪ್ರಸನ್ನವೆಂಕಟದಾಸರು

ಮತ್ತವನಲ್ಲೊ ಮುರಾರಿ ನಿನಗೆ ನಾ
ಮತ್ತವನಲ್ಲೊ ಮುರಾರಿ    

ನಿನ್ನಭೃತ್ಯರ ಭೃತ್ಯರ ಭೃತ್ಯರ ಭೃತ್ಯನಿಗೆತ್ತಣ ಸ್ವಾತಂತ್ರ್ಯ ಸಲಹಯ್ಯಶೌರಿ ಪ.

ರಂಗಾ ನೀ ಕೊಳ್ಳದ ಬಂಗಾರ ತಳಿಗ್ಯೂಟನುಂಗುವ ಮತ್ತವನಲ್ಲೊರಂಗಾ ನಿನ್ನ ಮರೆದಂಗನೆಯರನಾಲಂಗಿಸಿ ಮತ್ತವನಲ್ಲೊರಂಗಾ ನಿನ್ನೊಲುಮೆಯ ಡಿಂಗರರಂಘ್ರಿಗೆರಂಗದೆ ಮತ್ತವನಲ್ಲೊರಂಗಾ ನಿನ್ನೆಂಜಲೆನ್ನಂಗೈಯೊಳುಂಡು ರಾಜಂಗಳನುಡುಗುವ ಬಡವ ನಾನಲ್ಲದೆ 1

ನಾಥನೆ ನಾನೆಂದು ಮಾತು ಕಲಿತುಖಳವ್ರಾತಸಂಗದಿ ಮತ್ತವನಲ್ಲೊನಾಥ ನಿನ್ನ ಮೀರಿದಾತನುಂಟೆಂದು ನಿರ್ಭೀತಿಲಿ ಮತ್ತವನಲ್ಲೊನಾಥ ನಿನ್ನ ಗುಣಖ್ಯಾತಿ ಹೊಗಳದನ್ಯಸ್ತೌತ್ಯದಿ ಮತ್ತವನಲ್ಲೊನಾಥ ನಿನ್ನಡಿಯ ತೀರಥವೆ ಗತಿಯೆಂದುಯಾತನೆಗಂಜುವ ಬೆದರುಗುಳಿಯಲ್ಲದೆ 2

ತಂದೆ ನೀ ಮಾರಿದರೊಂದೊಪ್ಪು ಕೊಂದರೊಪ್ಪೆಂದಿಗೆ ಮತ್ತವನಲ್ಲೊತಂದೆ ನಿನ್ನ ಮನೆ ಹೊಂದಿದಟ್ಟಣೆಗೈದಿಬಂಧಿಸು ಮತ್ತವನಲ್ಲೊತಂದೆ ನಿನ್ನಾಯುಧ ಸಂದು ಸಂದಿಗೆ ಕಾಸಿತಂದಿಡು ಮತ್ತವನಲ್ಲೊತಂದೆ ಪ್ರಸನ್ನವೆಂಕಟಿಂದಿರೇಶನೊಬ್ಬ ಅಹುದೆಂದ ಸೊಕ್ಕೊಂದುಳ್ಳವನಲ್ಲದೆ 3
*******