Showing posts with label ಧುಮ್ಮಸಾಲೆನ್ನಿರ್ಯೋ ಶ್ರೀ ಗುರುವಿನ ಬಳಗವೆ ಧುಮ್ಮಸಾಲೆನ್ನಿ mahipati. Show all posts
Showing posts with label ಧುಮ್ಮಸಾಲೆನ್ನಿರ್ಯೋ ಶ್ರೀ ಗುರುವಿನ ಬಳಗವೆ ಧುಮ್ಮಸಾಲೆನ್ನಿ mahipati. Show all posts

Wednesday, 1 September 2021

ಧುಮ್ಮಸಾಲೆನ್ನಿರ್ಯೋ ಶ್ರೀ ಗುರುವಿನ ಬಳಗವೆ ಧುಮ್ಮಸಾಲೆನ್ನಿ ankita mahipati

 ಧುಮ್ಮಸಾಲೆನ್ನಿರ್ಯೋ ಶ್ರೀ ಗುರುವಿನ ಬಳಗವೆ ಧುಮ್ಮಸಾಲೆನ್ನಿ ಸದ್ಗುರುವಿನ ಬಳಗವೆ pa


ಗುರುವಿನ ಬಳಗವೆಂದು ಗುರುತುವಿಟ್ಟು ನೋಡಿರ್ಯೋ ಅರುಹಿನೊಳು ಮುಣಗಿ ಪರಮಸುಖ ಸೂರ್ಯಾಡಿರ್ಯೋ ಗರ್ವಿನಾಹರಿಗೆ ಬಿಟ್ಟು ಹರಿದುಹೋಗ ಬ್ಯಾಡಿರ್ಯೋ ಪರ್ವಣಿದೆ ಗುರುಕರುಣ ಪಡೆದು ಪೂರ್ಣಕೂಡಿರ್ಯೋ 1 

ಧುಮ್ಮಸಾಲೆನ್ನಿರ್ಯೋ ಬೆರದು ಬ್ರಹ್ಮ ಸುಖವ ಸಮ್ಯಙÁ್ಞನದಿಂದ ದೂರಮಾಡಿ ಭವದು:ಖವ ನಿಮ್ಮ ನಿಮ್ಮೊಳು ನೋಡಿ ಘನ ಕೌತುಕವ ಹ್ಯಮ್ಮಿಯೊಳಗಾಗಿ ನೀವು ಹೋಗಬ್ಯಾಡಿ ಹೋಕುವ 2 

ಕಣ್ಣದ್ಯರದು ನೋಡಿರ್ಯೊ ಚಿನ್ನುಮಯ ರೂಪವ ಭಿನ್ನವೆಲ್ಲದ್ಯದೆ ತನ್ನೊಳು ಸಮೀಪವ ಪುಣ್ಯ ಹಾನಿ ಮಾಡಿಕೊಂಡು ಹಿಡಯಬ್ಯಾಡಿ ಕೋಪವ ಕಣ್ಣ ದ್ಯರಸಿಕುಡುವ ಹಚ್ಚಿ ಗುರು ತಾನ ದೀಪವ 3 

ನಮ್ಮ ನಿಮ್ಮ ದ್ಯಾವರೆಂದು ಹೊಯಿದಾಡಬ್ಯಾಡಿರ್ಯೋ ಬೊಮ್ಮನ ಪಡದ ಪರಬ್ರಹ್ಮನೊಬ್ಬ ನೋಡಿರ್ಯೋ ಇಮ್ಮನಕ ಹೋಗದೆ ಒಮ್ಮನವ ಮಾಡಿರ್ಯೋ ಸುಮ್ಮನೆ ಸುವಿದ್ಯದೊಳು ಬೆರದು ನಿಜಗೂಡಿರ್ಯೋ 4 

ಸುಗ್ಗಿಯೋ ಸುಗ್ಗಿಯೋ ಸುಙÁ್ಞನದ ಲಗ್ಗಿಯೋ ಭಾಗ್ಯವಿದೆ ನೋಡಿ ಭಕ್ತಿ ಙÁ್ಞನ ವೈರಾಗ್ಯಯೋ ಬಗ್ಗಿ ನಡವ ಸಾಧುಸಂತ ಜನರಿಗಿದು ಯೋಗ್ಯಯೋ ಹಿಗ್ಗಿ ಹರುಷಪಡುವ ಮಹಿಪತಿಯ ನಿಜ ಸ್ರಾಘ್ಯಯೋ 5

***