Showing posts with label ಪುರುಷರೈವರು ಕೂಡಿ ಹರುಷದಿ ಬರುತಿರೆ bheemesha krishna. Show all posts
Showing posts with label ಪುರುಷರೈವರು ಕೂಡಿ ಹರುಷದಿ ಬರುತಿರೆ bheemesha krishna. Show all posts

Wednesday, 1 September 2021

ಪುರುಷರೈವರು ಕೂಡಿ ಹರುಷದಿ ಬರುತಿರೆ ankita bheemesha krishna

 ..

ಪುರುಷರೈವರು ಕೂಡಿ ಹರುಷದಿ ಬರುತಿರೆ

ಸರಸದಿ ಕೃಷ್ಣೆ ಕದವಿಕ್ಕೆ ಸರಸದಿ ಕೃಷ್ಣೆ ಕದವಿಕ್ಕೆ 1


ನಾಗವೇಣಿಯೆ ನೀನು ಸಾಗಿ ಮುಂದಕ್ಕೆ ಬಂದು

ಬಾಗಿಲಿಕ್ಕಿದ ಬಗೆ ಪೇಳೆ

ಬಾಗಿಲಿಕ್ಕಿದ ಬಗೆ ಪೇಳೆ 2


ದಾರು ಬಂದವರೆಂದು ಹೇಳದೆ ನಿಮ್ಮ ಹೆ-

ಸರ್ಹ್ಯಾಗೆ ತೆಗೆಯಲಿ ಕದವನು

ಹ್ಯಾಗೆ ತೆಗೆಯಲಿ ಕದವನು 3


ಹರದಿ ದ್ರೌಪದಿ ಕೇಳೆ ದೊರೆಯು ಧರ್ಮರು ನಾವು

ತ್ವರಿತದಿ ಬಂದೆವು ತೆಗೆ ನೀನು

ತ್ವರಿತದಿ ಬಂದೆವು ತೆಗೆ ನೀನು 4


ದೊರೆಗಳಾದರೆ ರಾಜ್ಯ ಪರರಿಗೆ ಕೊಟ್ಟು ತಾ-

ನಡವಿ ಯಾತಕೆ ತಿರುಗೀರಿ

ಅಡವಿ ಯಾತಕೆ ತಿರುಗೀರಿ5


ಪಟ್ಟದರಸನ ಕೂಡ ಇಷ್ಟು ಮಾತುಗಳ್ಯಾಕೆ

ಶ್ರೇಷ್ಠ ಭೀಮನು ನಾ ಬಂದೀನೆ

ಶ್ರೇಷ್ಠ ಭೀಮನು ನಾ ಬಂದೀನೆ 6


ಶ್ರೇಷ್ಠನಾದರೆ ಕೈಯ್ಯೊಳ್ಹುಟ್ಟು ಹಿಡಿದು ರಾಜ-

ಗಟ್ಟ್ಟಿ ಅಡಿಗೆ ಉಣೀಸ್ಹೋಗೋ ರಾಜ-

ಗಟ್ಟಿ ಅಡಿಗೆ ಉಣೀಸ್ಹೋಗೋ 7


ಪುಂಡಕೌರವರಿಗೆ ಗಂಡನೆನಿಸುವಂಥ

ಗಾಂಡೀವರ್ಜುನ ನಾ ಬಂದೀನೆ

ಗಾಂಡೀವರ್ಜುನ ನಾ ಬಂದೀನೆ 8


ದುಂಡು ಹರಡಿನಿಟ್ಟು ಗೊಂಡ್ಯದ್ಹೆರಳನ್ಹಾಕಿ-

ಕೊಂಡು ವಿದ್ಯವ ಕಲಿಸ್ಹೋಗೊ ಹಾಕಿ-

ಕೊಂಡು ವಿದ್ಯವ ಕಲಿಸ್ಹೋಗೊ 9


ಸಕಲವಿದ್ಯೆಗಳಲ್ಲಿ ಕುಶಲ ಸಂಪನ್ನನಾದ

ನಕುಲರಾಯನು ನಾ ಬಂದೀನೆ

ನಕುಲರಾಯನು ನಾ ಬಂದೀನೆ 10


ಸಕಲವಿದ್ಯೆಗಳಲ್ಲಿ ಕುಶಲನಾದರೆ ತೇಜಿ

ಕೆಲಸ ರಾಯರಿಗೆ ತಿಳಿಸ್ಹೋಗೊ

ಕೆಲಸ ರಾಯರಿಗೆ ತಿಳಿಸ್ಹೋಗೊ 11


ಪಾವಕÀತನುಜೆ ಮಾದೇವಹಾರದವೇಣಿ ಸ(ಹ)

ದೇವರಾಯನು ನಾ ಬಂದೀನೀಗ ಸ(ಹ)-

ದೇವರಾಯನು ನಾ ಬಂದೀನೀಗ 12


ಗೋವ ಕಾಯುತಲಿ ಗೋಪಾಲಕನಾಗಿ

ಕೊಳಲೂದಿ ಗೊಲ್ಲರೊಳಾಡಹೋಗೊ

ಕೊಳಲೂದಿ ಗೊಲ್ಲರೊಳಾಡಹೋಗೊ 13


ಮಾತುಳಾಂತಕನಲ್ಲಿ ಮಾತು ಕಲಿತು ಬಂದಿ(ಲ್ಲಿ)

ಸೋತೆವೆ ನಿನಗೆ ಸುಂದರಾಂಗಿ

ಸೋತೆವೆ ನಿನಗೆ ಸುಂದರಾಂಗಿ 14


ಸೋತರೇನಾಯಿತು ದ್ಯೂತಪಗಡೆ ಬಿಟ್ಟು ಅ-

ಜ್ಞಾತವಾಸವನೆ ಚರಿಸ್ಹೋಗೊ ಅ-

ಜ್ಞಾತವಾಸವನೆ ಚರಿಸ್ಹೋಗೊ15


ತಿರುಗಿ ತಿರುಗಿ ಭಾಳ ಬಳಲಿ ಬಂದೆವೆ ನಾವು

ಕರುಣವಿಲ್ಲವೆ ಕಮಲಾಕ್ಷಿ

ಕರುಣವಿಲ್ಲವೆ ಕಮಲಾಕ್ಷಿ 16


ಭಾಳ ಬಳಲಿದೆವೆಂದು ಹೇಳಿಕೊಂಡರು ಕರು-

ಣಾಳು ನಾನಲ್ಲ ಕರೆಯಲು ಕರು-

ಣಾಳು ನಾನಲ್ಲ ಕರೆಯಲು 17


ಕಾಮನಯ್ಯನ ಕರುಣಕ್ಕೆ ಪಾತ್ರರೆ ನಾವು

ಸಾಮಜಗಮನೆ ಸರಸ್ಯಾಕೆ

ಸಾಮಜಗಮನೆ ಸರಸ್ಯಾಕೆ 18


ಹೇಮಮಾಣಿಕ್ಯದ ಕದವ ತೆಗೆದು ಪತಿಗಳಿಗೆ

ಪ್ರೇಮದಿಂದೆರಗಿ ಕರೆದಳು

ಪ್ರೇಮದಿಂದೆರಗಿ ಕರೆದಳು 19


ಆದರದಿಂದ ಕರೆಯಲರ್ಜುನ ಭೀಮ ಧರ್ಮ

ಸಾದೇವ ನಕುಲ ಸಹಿತಾಗಿ

ಸಾದೇವ ನಕುಲ ಸಹಿತಾಗಿ 20


ಪಂಚಪಾಂಡವರು ಬಂದು ಪರಮ ಸಂಭ್ರಮದಿಂದ

ಮಂಚದ ಮ್ಯಾಲೆ ಕುಳಿತಾರೊ

ಮಂಚದ ಮ್ಯಾಲೆ ಕುಳಿತಾರೊ21


ಥsÀಳಕು ಬೆಳಕಿನಿಂದ ಝಳಕು ಮಿಂಚುಗಳಂತೆ

ಬಳುಕುತ ಬಾಳೆಸುಳಿಯಂತೆ

ಬಳುಕುತ ಬಾಳೆಸುಳಿಯಂತೆ22


ಗಂಡರೈವರ ಮುಂದೆ ಗರುವಿಲೆ ನಿಂತಳು

ದುಂಡುಮಲ್ಲಿಗೆ ಶಿರ ಬಾಗಿ

ದುಂಡುಮಲ್ಲಿಗೆ ಶಿರ ಬಾಗಿ 23


ಕರಕಮಲವ ಪಿಡಿದು ಕರೆದು ಸಾದೇವ ಕೃಷ್ಣೆ-

ತುರುವಿಗ್ಹೂಮಾಲೆ ಮುಡಿಸಿದ ಕೃಷ್ಣೆ-

ತುರುವಿಗ್ಹೂಮಾಲೆ ಮುಡಿಸಿದ 24


ಮುಖಬೆವರ್ವೊರೆಸುತ ನಕುಲರಾಯನು ಭಾಳ

ಸುಖದಿ ಮುದ್ದಿಸಿದ ಮಡದಿಯ

ಸುಖದಿ ಮುದ್ದಿಸಿದ ಮಡದಿಯ 25


ಅರ್ಜುನಾಗಲೆ ಮೋಹದಿಂದ ಮುಂಗುರುಳು ತಿದ್ದಿ

ವಜ್ರದಾಭರಣನಿಡಿಸಿದ

ವಜ್ರದಾಭರಣನಿಡಿಸಿದ 26


ಭೀಮ ನಗುತ ಬಿಗಿದಪ್ಪಿ ದ್ರೌಪದಿಯ ಧರ್ಮ-

ರಾಯನ ತೊಡೆಯಲ್ಲಿರಿಸಿದ ಧರ್ಮ-

ರಾಯನ ತೊಡೆಯಲ್ಲಿರಿಸಿದ 27


ಧರ್ಮ ಮುತ್ತಿನ ಹಾರ ಪದಕ ಕೊರಳಿಗೆ ಹಾಕಿ

ವರಮೋಹನಾಂಗಿ ಒಲಿಸಿದ

ವರಮೋಹನಾಂಗಿ ಒಲಿಸಿದ 28||


ಸಿಂಧುಸುತನ ಮುಖಬಿಂಬ ಸೋಲಿಸುವಂಥ

ಚಂದ್ರವದನೆ ಮುನಿಸ್ಯಾಕೆ

ಚಂದ್ರವದನೆ ಮುನಿಸ್ಯಾಕೆ 29


ಮಾತಿನರಗಿಳಿಯೆ ನೀ ಜ್ಯೋತಿ ಮುತ್ತಿನ ಗೊಂಬೆ

ಪ್ರೀತಿಪತಿಗಳ ನೀ ನೋಡೆ

ಪ್ರೀತಿಪತಿಗಳ ನೀ ನೋಡೆ 30

ಪ್ರಾಣಪದಕವೆಂದು ತಿಳದೆವೈವರು ನಿನ್ನ (sorry, incomplete)

***