RSS song .
ಗಂಗೆ ತುಂಗೆ ಹರಿವ ನಾಡು ನಮ್ಮ ಭಾರತ |
ಸ್ವರ್ಗಕ್ಕಿಂತ ಮಿಗಿಲು ನಮ್ಮ ಭವ್ಯಭಾರತ ||ಪ||
ಬೆಳ್ಳಿಬೆಟ್ಟ ತಾಯ ಶಿರಕೆ ಹೊಳೆವ ಮುಕುಟವು
ಹಚ್ಚಹಸಿರ ಸಸ್ಯರಾಶಿ ದಿವ್ಯ ವಸ್ತ್ರವು
ಮೂರು ಜಲಧಿ ಒಂದುಗೂಡಿ ಪಾದತೊಳೆವವು
ಕೋಟಿ ಅಲೆಗಳಿಂದ ನಿತ್ಯ ಸ್ತುತಿಯ ಗೈವವು ||೧||
ಉಷೆಯ ಉದಯರಾಗದೊಡನೆ ಬರುವ ನೇಸರ
ಹೊಸತು ಹುರುಪು ತುಂಬಿ ಅಳಿಸಿ ಮನದ ಬೇಸರ
ನಾಡಮೂಲೆ ಮೂಲೆಗಳಿಗೂ ಬೆಳಕ ಬೀರುತಾ
ಅಂಧಕಾರ ನೀಗಿ ನಿಶೆಗೆ ಅಂತ್ಯ ಸಾರುತಾ ||೨||
ಜಗಕೆ ಜ್ಞಾನಧಾರೆ ಎರೆದ ವೇದ ಜನನಿಯು
ಪಶುಗಳಲ್ಲು ಪರಮಶಿವನ ಕಂಡ ಧರಣಿಯು
ಭಾಷೆ ವೇಷ ಭಿನ್ನ ಭಿನ್ನ ಏಕಸಂಸ್ಕೃತಿ
ಸತ್ಯಶಾಂತಿ ಪ್ರೇಮಮೂರ್ತಿ ತಾಯಿ ಭಾರತಿ ||೩||
***
gaMge tuMge hariva nADu namma BArata |
svargakkiMta migilu namma BavyaBArata ||pa||
beLLibeTTa tAya Sirake hoLeva mukuTavu
haccahasira sasyarASi divya vastravu
mUru jaladhi oMdugUDi pAdatoLevavu
kOTi alegaLiMda nitya stutiya gaivavu ||1||
uSheya udayarAgadoDane baruva nEsara
hosatu hurupu tuMbi aLisi manada bEsara
nADamUle mUlegaLigU beLaka bIrutA
aMdhakAra nIgi niSege aMtya sArutA ||2||
jagake j~jAnadhAre ereda vEda jananiyu
paSugaLallu paramaSivana kaMDa dharaNiyu
BAShe vESha Binna Binna EkasaMskRuti
satyaSAMti prEmamUrti tAyi BArati ||3||
***