RAO COLLECTIONS SONGS refer remember refresh render DEVARANAMA
..
ಕೋಲದೇವ ತನಯ ಕೂಲ ಸುನಿಲಯ
ಪಾಲಿಸು ಜೀಯಾ ನೀ ಪಾಲಿಸು ಜೀಯಾ ಪ
ದೇವಸ್ವಭಾವ ಮಹಿದೇವ ಸಂಸೇವಿತ
ಪಾವನ ಸುಚರಿತ ದೇವ ಮುನಿಗತಿಪ್ರೀತ 1
ದೈಶಿಕ ಕುಲನಾಥ ಪೂಶರನಿರ್ಜಿತ |
ಭಾಸುರ ಕಾಷಾಯ ವಾಸ ಭೂಷ ವ್ಯಾಸರಾಯಾ 2
ಶಾಮಸುಂದರ ಮೂಲರಾಮಪದಾರ್ಚಕ
ಕಾಮ ಕಾರ್ಮುಕ ಗಜಸ್ತೋಮಸಿಂಗ ಮಂಗಳಾಂಗ 3
***