ಮಂಗಲ ಮಾನವಿ ನಿಲಯ ಕವಿಗೇಯ
ಗುರುರಾಯ ಗುರುರಾಯ ಪಿಡಿಕೈಯಾ ಪ
ಪರಮ ಕರುಣದಲಿ ವಿರಚಿತ ಶ್ರೀ ಮ-
ದ್ಹರಿಯ ಕಥಾಮೃತ ಗ್ರಂಥ ಶುಭ್ರ
ಚರಿತ ಜಗನ್ನಾಥ ಜಗನ್ನಾಥ ಪ್ರಖ್ಯಾತ1
ಮೇದಿನಿ ಸುರರಿಗೆ ಮೋದಮುನಿ ಮತದ
ಭೇದ ಪಂಚಕ ಸುಬೋಧ ಪ್ರದರಾದ ಸ-
ಹ್ಲಾದ ಕೊಡು ಮೋದ 2
ಶರಣು ಜನಕೆ ಸುರತರುವೆಂದೆನಿಸಿದ
ಸಿರಿಕಾರ್ಪರ ಶುಭನಿಲಯ
ನರಹರಿಯ ಸುಪ್ರೀಯ ಸುಪ್ರೀಯ ದಾಸಾರ್ಯ 3
****